ಇಂಟರ್ ನೆಟ್ ನಲ್ಲಿ ಸಿಕ್ಕ ‘ಆರ್ ಬಿಐ ಸಹಾಯವಾಣಿ’ಗೆ ಕರೆ ಮಾಡಿ 48 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

Update: 2019-01-15 08:30 GMT

ಮುಂಬೈ, ಜ.15: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಾಯವಾಣಿ ಎಂದು ವೆಬ್ ಸರ್ಚ್ ನಲ್ಲಿ ಸಿಕ್ಕ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ಮುಂಬೈಯ ಮಲಾಡ್ ನಿವಾಸಿ, 74 ವರ್ಷದ ವಿಜಯ್ ಕುಮಾರ್ ಮರ್ವ 48,000 ರೂ. ಕಳೆದುಕೊಂಡಿದ್ದಾರೆ.

ಕಳೆದ ತಿಂಗಳು ಮನೆಯನ್ನು ಶುಚಿಗೊಳಿಸುವಾಗಿ ಅವರಿಗೆ ಅಮಾನ್ಯಗೊಂಡ ರೂ 7,000 ಮೌಲ್ಯದ ನೋಟುಗಳು ದೊರಕಿತ್ತು. ಇದನ್ನು ಬದಲಾಯಿಸಬೇಕೆಂದು ಅಂದುಕೊಂಡು ತಮ್ಮ ಮೊಬೈಲ್ ಫೋನ್ ಮೂಲಕ ಅಂತರ್ಜಾಲ ಜಾಲಾಡಿದಾಗ ಆರ್‍ಬಿಐ ಸಹಾಯವಾಣಿ ಎನ್ನಲಾದ ದೂರವಾಣಿ ಸಂಖ್ಯೆಯೊಂದು ದೊರಕಿತ್ತು. ಅದು  ನಕಲಿ ಸಂಖ್ಯೆಯೆಂದು ತಿಳಿಯದ ವಿಜಯ್ ಕುಮಾರ್ ಅದಕ್ಕೆ ಕರೆ ಮಾಡಿದಾಗ ಅತ್ತ ಕಡೆಯಿಂದ ಮಾತನಾಡಿದ  ವ್ಯಕ್ತಿ ತಾನು  ಹಣ ಜಮೆ ಮಾಡಬೇಕಾದರೆ ಬ್ಯಾಂಕ್ ಖಾತೆ ವಿವರಗಳು ಬೇಕೆಂದು ಹೇಳಿ ಅವರ ಕ್ರೆಡಿಟ್ ಕಾರ್ಡ್ ಮಾಹಿತಿ, ಒಟಿಪಿ ಕೂಡ ಪಡೆದಿದ್ದ. ಇದಾದ ಕೆಲವೇ ನಿಮಿಷಗಳಲ್ಲಿ ವಿಜಯ್ ಕುಮಾರ್ ಅವರ ಖಾತೆಯಿಂದ ರೂ 48,000ವನ್ನು ತೆಗೆಯಲಾಗಿತ್ತು.

ತಾನು ಮೋಸ ಹೋಗಿರುವುದಾಗಿ ಅರಿತು ಅವರು ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News