ಶಸ್ತ್ರಸಜ್ಜಿತ ದರೋಡೆಕೋರರಿಂದ ತುರಂತೊ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಲೂಟಿ

Update: 2019-01-17 07:50 GMT

ಹೊಸದಿಲ್ಲಿ, ಜ.17: ದಿಲ್ಲಿ ಹೊರವಲಯದ ಬಾಡ್ಲಿ ಪ್ರದೇಶದಲ್ಲಿ ಜಮ್ಮುವಿಗೆ ತೆರಳುತ್ತಿದ್ದ ತುರಂತೊ ಎಕ್ಸ್‌ಪ್ರೆಸ್‌ನೊಳಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರ ತಂಡ ಪ್ರಯಾಣಿಕರನ್ನು ಲೂಟಿಗೈದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿನ ಎರಡು ಎಸಿ ಬೋಗಿಯೊಳಗೆ ನುಗ್ಗಿದ 7ರಿಂದ 10 ದರೋಡೆಕೋರರು ಹರಿತವಾದ ಆಯುಧ ತೋರಿಸಿ, ಬೆದರಿಸಿ ದರೋಡೆ ಮಾಡಿದ್ದಾರೆ. ಮುಂಜಾನೆ 3:30ರ ಸಮಯದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರ ದೂರಿನ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಿ3 ಹಾಗೂ ಬಿ7 ಬೋಗಿಗಳಿಗೆ ಹತ್ತಿದ್ದ ದರೋಡೆಕೋರರು ಪ್ರಯಾಣಿಕರ ಬಳಿಯಿದ್ದ ಹಣ, ಮೊಬೈಲ್, ಎಟಿಎಂ ಕಾರ್ಡ್ ಹಾಗೂ ಚಿನ್ನವನ್ನು ಎಗರಿಸಿದ್ದಾರೆ. ಈ ಘಟನೆ 10-15 ನಿಮಿಷಗಳ ಕಾಲ ನಡೆದಿದೆ. ಅಪರಾಧಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News