ಫ್ರಾನ್ಸ್‌ನಿಂದ ಗೂಗಲ್‌ಗೆ 405 ಕೋಟಿ ರೂ. ದಂಡ
Update: 2019-01-22 16:58 GMT
ಪ್ಯಾರಿಸ್, ಜ. 22: ಅಮೆರಿಕದ ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೆ ಫ್ರಾನ್ಸ್ 50 ಮಿಲಿಯ ಯುರೋ (ಸುಮಾರು 405 ಕೋಟಿ ರೂಪಾಯಿ) ದಂಡ ವಿಧಿಸಿದೆ.
ಗೂಗಲ್ ನ ‘ದತ್ತಾಂಶ ಅನುಮತಿ’ ನೀತಿಗಳ ಬಗ್ಗೆ ಪಾರದರ್ಶಕ ಹಾಗೂ ಸುಲಭವಾಗಿ ಪಡೆಯಬಹುದಾದ ಮಾಹಿತಿ ನೀಡಲು ವಿಫಲವಾಗಿರುವುದಕ್ಕಾಗಿ ಫ್ರಾನ್ಸ್‌ನ ದತ್ತಾಂಶ ನಿಯಂತ್ರಣ ಸಂಸ್ಥೆ ಈ ದಾಖಲೆಯ ದಂಡ ವಿಧಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ.
ಐರೋಪ್ಯ ಒಕ್ಕೂಟದ ಕಠಿಣ ‘ಸಾಮಾನ್ಯ ದತ್ತಾಂಶ ರಕ್ಷಣಾ ನಿಯಂತ್ರಣ’ವನ್ನು ಮೊದಲ ಬಾರಿಗೆ ಬಳಸಿ ದಂಡ ವಿಧಿಸಲಾಗಿದೆ.