ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನ

Update: 2019-01-26 06:26 GMT

 ಹೊಸದಿಲ್ಲಿ, ಜ.26: ರಾಜ್‌ಪಥ್‌ನಲ್ಲಿ ನಡೆದ ಭಾರತದ 70ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಶಕ್ತಿ ಪ್ರದರ್ಶನವಾಯಿತು. ಹಲವು ನೌಕಾ ಹಾಗೂ ಸೇನಾ ಪಡೆಗಳ ನೇತೃತ್ವವನ್ನು ಮಹಿಳೆಯರೇ ವಹಿಸಿದ್ದರು. ಡೆರ್‌ಡೆವಿಲ್ ಟೀಮ್ ಪರವಾಗಿ ರಾಜ್‌ಪಥ್‌ನಲ್ಲಿ ಮಹಿಳಾ ಅಧಿಕಾರಿಯೊಬ್ಬರು ಬೈಕ್ ಸಾಹಸವನ್ನು ಪ್ರದರ್ಶಿಸಿದರು.

‘‘ಈ ಬಾರಿಯ ಗಣರಾಜ್ಯೋತ್ಸವ ದಿನದ ಪಥಸಂಚಲನ ನಾರಿ ಶಕ್ತಿಯ(ಮಹಿಳಾ ಶಕ್ತಿ)ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ನೌಕೆ, ಭಾರತೀಯ ಸೇನೆ ಸಹಿತ ಎಲ್ಲ ಪಡೆಗಳ ನೇತೃತ್ವವನ್ನು ಮಹಿಳೆಯರೇ ವಹಿಸಿದ್ದರು’’ ಎಂದು ಮೇಜರ್ ಜನರಲ್ ರಾಜ್‌ಪಾಲ್ ಪೂನಿಯಾ ಹೇಳಿದ್ದಾರೆ.

ಅಸ್ಸಾಂ ರೈಫಲ್ಸ್ ಪಡೆಯ ಎಲ್ಲ ಮಹಿಳೆಯರು ಸೇರಿದಂತೆ ಈ ವರ್ಷದ ಪರೇಡ್‌ನಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿ ಭಾಗಿಯಾಗಿದ್ದು ಕಂಡುಬಂದಿತು. ಮೊದಲ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿರುವ ಅಸ್ಸಾಂ ರೈಫಲ್ಸ್ ದಳ ಇತಿಹಾಸ ನಿರ್ಮಿಸಿತು. 30ರ ಹರೆಯದ ಖುಷ್ಬೂ ಕನ್ವರ್ ಅಸ್ಸಾಂ ರೈಫಲ್ಸ್‌ನ ನೇತೃತ್ವವಹಿಸಿದ್ದರು. ಇದು ದೇಶದ ಅತ್ಯಂತ ಹಳೆಯ ಅರೆ ಸೇನಾಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News