ಇನ್ನು ಜಗತ್ತಿನ ಏಳು ಅದ್ಭುತಗಳನ್ನು ದಿಲ್ಲಿಯಲ್ಲಿ ನೋಡಲು ಸಾಧ್ಯ

Update: 2019-01-30 09:13 GMT

(ಚಿತ್ರ ಕೃಪೆ: ಅನಿಂದ್ಯಾ ಛಟ್ಟೋಪಾಧ್ಯಾಯ, timesofindia.indiatimes.com)

ಹೊಸದಿಲ್ಲಿ, ಜ.30: ಪ್ರವಾಸಿಗರಿಗೆ ಜಗತ್ತಿನ ಏಳು ಅದ್ಭುತಗಳನ್ನು ನೋಡಲು ಹೆಚ್ಚು ದೂರ ಹೋಗಬೇಕಾಗಿಲ್ಲ. ದೇಶದ ರಾಜಧಾನಿ ದಿಲ್ಲಿಯಲ್ಲಿ ಜಗತ್ತಿನ  ಏಳು ಅದ್ಬುತಗಳ ಮರು ಸೃಷ್ಠಿಯಾಗಿದೆ.

ಆಗ್ನೇಯ  ದಿಲ್ಲಿಯ  ಸರೈ ಕಾಲೆ  ಖಾನ್  ಬಸ್ ನಿಲ್ದಾಣದ ಸಮೀಪ ವಿಶ್ವದ  7 ಅದ್ಬುತಗಳ ಪ್ರತಿಕೃತಿಗಳ ಪಾರ್ಕ್ ವಿಶ್ವದಲ್ಲೇ ಮೊದಲ ಬಾರಿ ತಲೆ ಎತ್ತಿದ್ದು,   ಫೆ.9ರಿಂದ  ಪ್ರವಾಸಿಗಳು ವಿಶ್ವದ  ಏಳು ಅದ್ಭುತಗಳನ್ನು ನೋಡಲು ವಿಶ್ವದಾದ್ಯಂತ ಸುತ್ತಾಡಬೇಕಾಗಿಲ್ಲ.ದಿಲ್ಲಿಗೆ ಹೋದರೆ ಹೋದರೆ ಎಲ್ಲವೂ ಅಲ್ಲಿ ಲಭ್ಯ .

ದಕ್ಷಿಣ ದಿಲ್ಲಿಯ  ಮುನ್ಸಿಪಲ್ ಕಾರ್ಪೋರೇಷನ್  ಪಾರ್ಕ್ ನ್ನು ಬೆಳಗಿಸಲು ವಿದ್ಯುತ್ ಗಾಗಿ  ಹೊಸ ದಾರಿಯನ್ನು ಕಂಡು ಹಿಡಿದಿದೆ.  ವಿಂಡ್ –ಸೋಲಾರ್  ವಿದ್ಯುತ್ ಮೂಲಕ ಜಗತ್ತಿನ  7 ಅದ್ಭುತಗಳ ಪಾರ್ಕ್ ಬೆಳಗಲಿದೆ.   

ವಿಶ್ವದ ಅದ್ಬುತಗಳ ಪಾರ್ಕ್ ನಲ್ಲಿ  ಆಗ್ರಾದ ತಾಜ್ ಮಹಲ್ , ಗೀಝಾದ ಮಹಾ ಪಿರಮಿಡ್, ಪ್ಯಾರಿಸ್ ನ ಐತಿಹಾಸಿಕ ಐಫೆಲ್ ಟವರ್ ,  ಪೀಸಾದ ವಾಲು ಗೋಪುರ , ರಿಯೊ ಡಿ ಜನೈರೊದ  ಕ್ರೈಸ್ತ ರಿಡೀಮರ್ ಪ್ರತಿಮೆ , ರೋಮ್ ನ  ಕೊಲೊಸ್ಸಿಯಮ್ ಮತ್ತು ನ್ಯೂಯಾರ್ಕ್ ನ ಏಕತಾ ಪ್ರತಿಮೆ ದಿಲ್ಲಿಯ ವಂಡರ್ ಪಾರ್ಕ್ ನಲ್ಲಿ ಎಲೆ ಎತ್ತಿವೆ.  ಈ ಪಾರ್ಕ್  ಗೆ ಆಗಿರುವ ವೆಚ್ಚ 7.5 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News