ಉತ್ತರಪ್ರದೇಶ: ಬಿಡಾಡಿ ದನಗಳು ಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಶಿಕ್ಷಕರ ಪಾಠ ಬಯಲಿನಲ್ಲಿ!

Update: 2019-01-31 14:54 GMT
ಸಾಂದರ್ಭಿಕ ಚಿತ್ರ

ಮುಝಫ್ಫರ್‌ನಗರ,ಜ.31: ಬಿಡಾಡಿ ದನಗಳನ್ನು ಕೂಡಿಹಾಕಲು ಇಲ್ಲಿಯ ಸರಕಾರಿ ಪ್ರಾಥಮಿಕ ಶಾಲೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ತೆರವುಗೊಳಿಸಿದ ಆರೋಪದಲ್ಲಿ 24 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬಿಡಾಡಿ ದನಗಳಿಗೆ ಆಶ್ರಯ ಒದಗಿಸಲು ವ್ಯವಸ್ಥೆಗಳನ್ನು ಮಾಡುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತಿಂಗಳ ಹಿಂದೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಕುಡನ ಗ್ರಾಮಸ್ಥರು ಬುಧವಾರ ಬಿಡಾಡಿ ದನಗಳನ್ನು ಶಾಲೆಗೆ ತಂದು ಕೂಡಿಹಾಕಿ ಬೀಗ ಹಾಕಿದ್ದರು ಎಂದು ಶಾಮ್ಲಿ ಜಿಲ್ಲಾಧಿಕಾರಿ ಅಖಿಲೇಶ ಕುಮಾರ ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬಲವಂತದಿಂದ ಶಾಲಾ ಕಟ್ಟಡದಿಂದ ತೆರವುಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆಯು ದೂರಿನಲ್ಲಿ ಹೇಳಿದೆ.

 ಇದರಿಂದಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬಯಲಿನಲ್ಲಿಯೇ ಬೋಧಿಸುವಂತಾಯಿತು ಎಂದು ಅನಾಮಿಕ ಮೂಲಗಳು ತಿಳಿಸಿವೆ.

ಬಿಡಾಡಿ ದನಗಳು ತಮ್ಮ ಬೆಳೆಗಳನ್ನು ನಾಶಗೊಳಿಸುತ್ತಿವೆ ಎಂದು ರಾಜ್ಯದ ರೈತರು ದೀರ್ಘಕಾಲದಿಂದಲೂ ದೂರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News