ಪ್ರಧಾನಿ ಮೋದಿ ರಾಜಕೀಯ ನಿವೃತ್ತಿ ಪಡೆದ ದಿನವೇ ನಾನೂ ನಿವೃತ್ತಿಯಾಗುವೆ: ಇರಾನಿ

Update: 2019-02-04 07:51 GMT

ಪುಣೆ, ಫೆ.4: ''ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಕೀಯದಿಂದ ನಿವೃತ್ತಿಯಾದ ದಿನವೇ ನಾನೂ ಕೂಡ ಭಾರತೀಯ ರಾಜಕೀಯದಿಂದ ದೂರವಾಗುವೆ’’ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.

ಎರಡನೇ ಆವೃತ್ತಿಯ 'ವರ್ಲ್ಡ್ ಕೌಂಟ್' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇರಾನಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.

 ‘‘ಕೊನೆಯ ಕ್ಷಣದಲ್ಲಿ ನಾನು ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೋ, ಇಲ್ಲವೋ ಎಂದು ಗೊತ್ತಾಗುತ್ತದೆ. ಈ ಕಾರ್ಯಕ್ರಮದ ಹೆಸರು 'ವರ್ಲ್ಡ್ ಕೌಂಟ್'. ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಅಮಿತ್ ಶಾ ಅವರ 'ಮಾತೇ ಕೌಂಟ್' ಆಗುತ್ತದೆ. ಅಟಲ್‌ಬಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಅವರಂತಹ ನಾಯಕರ ಕೈ ಕೆಳಗೆ ಕೆಲಸ ಮಾಡುವ ಅದೃಷ್ಟ ನನಗೆ ಲಭಸಿದೆ. ಪ್ರಧಾನಿ ಮೋದಿ ನಿವೃತ್ತಿಯಾದ ದಿವಸವೇ ನಾನು ರಾಜಕೀಯದಿಂದ ದೂರ ಸರಿಯುತ್ತೇನೆ. ಇದು ನನ್ನ ಹೆಬ್ಬಯಕೆಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News