ಬಿಜೆಪಿಯಲ್ಲಿ ಸ್ವಲ್ಪವಾದರೂ ಧೈರ್ಯವಿರುವ ವ್ಯಕ್ತಿಯೆಂದರೆ ಗಡ್ಕರಿ ಮಾತ್ರ: ರಾಹುಲ್ ಗಾಂಧಿ

Update: 2019-02-04 14:35 GMT

ಹೊಸದಿಲ್ಲಿ,ಫೆ.4: ಶನಿವಾರ ದ್ವಂದ್ವಾರ್ಥದ ಹೇಳಿಕೆಯೊಂದನ್ನು ನೀಡುವ ಮೂಲಕ ಊಹಾಪೋಹಗಳನ್ನು ಹುಟ್ಟುಹಾಕಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ‘ಬಿಜೆಪಿಯಲ್ಲಿ ಸ್ವಲ್ಪವಾದರೂ ಧೈರ್ಯವಿರುವ ಏಕೈಕ ವ್ಯಕ್ತಿ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವ್ಯಂಗ್ಯಭರಿತವಾಗಿ ಪ್ರಶಂಸಿಸಿದ್ದಾರೆ.

ಸಚಿವರ ಇತ್ತೀಚಿನ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿರುವ ರಾಹುಲ್,‘ಗಡ್ಕರಿಜಿ,ನಿಮಗೆ ಅಭಿನಂದನೆಗಳು. ಬಿಜೆಪಿಯಲ್ಲಿ ಸ್ವಲ್ಪವಾದರೂ ಧೈರ್ಯವಿರುವ ವ್ಯಕ್ತಿಯೆಂದರೆ ನೀವು ಮಾತ್ರ. ದಯವಿಟ್ಟು ರಫೇಲ್ ಹಗರಣ ಮತ್ತು ಅನಿಲ್ ಅಂಬಾನಿ,ರೈತರ ಸಂಕಷ್ಟಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿನಾಶ ಇವುಗಳ ಕುರಿತೂ ಹೇಳಿಕೆಗಳನ್ನು ನೀಡಿ’ ಎಂದು ಟ್ವೀಟಿಸಿದ್ದಾರೆ.

ಶನಿವಾರ ನಾಗ್ಪುರದಲ್ಲಿ ಎಬಿವಿಪಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭ ಗಡ್ಕರಿ ಅವರು, ತಮ್ಮ ಮನೆಯನ್ನು ನಿರ್ವಹಿಸಲಾಗದವರು ದೇಶವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News