ಬೋಯಿಂಗ್‌ನಿಂದ ಐಎಎಫ್‌ಗೆ ನಾಲ್ಕು ಚಿನೂಕ್ ಹೆಲಿಕಾಪ್ಟರ್‌ಗಳ ಪೂರೈಕೆ

Update: 2019-02-10 16:41 GMT

ಶಿಲ್ಲಾಂಗ್, ಫೆ. 10: ಭಾರತೀಯ ವಾಯು ಪಡೆಗೆ ನಿಯೋಜಿಸಲು ಉದ್ದೇಶಿಸಿರುವ ಅಮೆರಿಕದ ಪ್ರಮುಖ ವೈಮಾನಿಕ ಯಾನ ಸಂಸ್ಥೆ ಬೋಯಿಂಗ್‌ನ ನಾಲ್ಕು ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳ ಮೊದಲ ಗುಂಪು ಗುಜರಾತ್‌ನ ಮಂದ್ರಾ ಬಂದರಿಗೆ ಶೀಘ್ರದಲ್ಲಿ ಆಗಮಿಸಲಿದೆ.

ಈ ವರ್ಷಾಂತ್ಯದಲ್ಲಿ ಸಿಎಚ್ 47ಎಫ್ ಚಿನೂಕ್ಸ್ ಚಂಡಿಗಢದಲ್ಲಿ ಭಾರತೀಯ ಸೇನೆಗೆ ಔಪಚಾರಿಕವಾಗಿ ನಿಯೋಜನೆಯಾಗಲಿದೆ ಎಂದು ಬೋಯಿಂಗ್‌ನ ಹೇಳಿಕೆ ತಿಳಿಸಿದೆ. ಪಡೆಗಳು, ಯುದ್ಧ ಸಾಮಗ್ರಿಗಳು, ಉಪಕರಣಗಳು ಹಾಗೂ ಇಂದನ ಸಾಗಾಟಕ್ಕೆ ಬಳಸಲಾಗುವ ಚಿನೂಕ್ ಬಹುಪಯೋಗಿ, ಲಂಬವಾಗಿ ಮೇಲೇರುವ ಸಾಮರ್ಥ್ಯ ಹೊಂದಿದೆ.

ಮಾನವೀಯ ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆಯಲ್ಲಿ ಹಾಗೂ ಪರಿಹಾರ ಸಾಮಗ್ರಿಗಳ ಪೂರೈಕೆ, ನಿರಾಶ್ರಿತರ ಸಾಮೂಹಿಕ ಸ್ಥಳಾಂತರದ ಸಂದರ್ಭದಲ್ಲಿ ಇದನ್ನು ಬಳಸಬಹುದು. 22 ಅಪಾಚೆ ಹೆಲಿಕಾಪ್ಟರ್‌ಗಳು ಹಾಗೂ 15 ಚಿನೂಕ್ ಗಳನ್ನು ಖರೀದಿಗೆ ಸಂಬಂಧಿಸಿ ಬೋಯಿಂಗ್‌ನೊಂದಿಗೆ ಭಾರತೀಯ ವಾಯು ಪಡೆಯ ಗುತ್ತಿಗೆ 2015 ಸೆಪ್ಟಂಬರ್‌ನಲ್ಲಿ ಅಂತ್ಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News