ಅಲಬಾಮದಲ್ಲಿ ಬಿರುಗಾಳಿ: ಕನಿಷ್ಠ 23 ಸಾವು
Update: 2019-03-04 17:33 GMT
ವಾಶಿಂಗ್ಟನ್, ಮಾ. 4: ಅಮೆರಿಕದ ಅಲಬಾಮ ರಾಜ್ಯದ ಲೀ ಕೌಂಟಿಯಲ್ಲಿ ರವಿವಾರ ಬೀಸಿದ ಬಿರುಗಾಳಿಗೆ ಸಿಲುಕಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.
ರಕ್ಷಣಾ ಸಿಬ್ಬಂದಿ ಉರುಳಿದ ಮನೆಗಳ ಅಡಿಯಲ್ಲಿ ಶೋಧ ನಡೆಸುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘‘ಮನೆಗಳಿದ್ದ ಕಡೆಯಲ್ಲಿ ಈಗ ಅವಶೇಷಗಳಿವೆ. ಇದು ಈಗ ನಾವು ಎದುರಿಸುತ್ತಿರುವ ದೊಡ್ಡ ಸವಾಲು’’ ಎಂದು ಲೀ ಕೌಂಟಿ ಶೆರಿಫ್ ಜೇ ಜೋನ್ಸ್ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.
ನೆರೆಯ ಜಾರ್ಜಿಯದಲ್ಲೂ ಬಿರುಗಾಳಿ ದಾಂಧಲೆ ನಡೆಸಿದೆ. 21,000ಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳು ಕಡಿತಗೊಂಡಿವೆ.