1930ರ ದಶಕದಿಂದಲೂ ಮಸ್ಲಿಮರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಚೀನಾ: ಅಮೆರಿಕ

Update: 2019-03-14 17:19 GMT

ವಾಶಿಂಗ್ಟನ್, ಮಾ. 14: ಚೀನಾದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳನ್ನು ಬುಧವಾರ ಖಂಡಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ, ತನ್ನ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ಅದು ನಡೆಸಿರುವ ದೌರ್ಜನ್ಯವನ್ನು 1930ರ ಬಳಿಕ ಜಗತ್ತು ಬೇರೆಲ್ಲೂ ಕಂಡಿಲ್ಲ ಎಂದಿದೆ.

ಅಮೆರಿಕದ ವಾರ್ಷಿಕ ‘ಕಂಟ್ರಿ ರಿಪೋರ್ಟ್ಸ್ ಆನ್ ಹ್ಯೂಮನ್ ಪ್ರಾಕ್ಟಿಸಸ್’ನಲ್ಲಿ ದಾಖಲಾಗಿರುವ ಕೆಲವು ದೇಶಗಳ ವಿರುದ್ಧದ ಆರೋಪಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪ್ರಸ್ತಾಪಿಸಿದರು.

ಇರಾನ್, ದಕ್ಷಿಣ ಸುಡಾನ್, ನಿಕಾರಗುವ ಮತ್ತು ಚೀನಾಗಳಲ್ಲಿ ನಡೆದಿದೆಯೆನ್ನಲಾದ ಮಾನವಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಅವರು ಮುಖ್ಯವಾಗಿ ಪ್ರಸ್ತಾಪಿಸಿದರು. ಆದರೆ, ಮಾನವಹಕ್ಕು ಉಲ್ಲಂಘನೆಗಳ ವಿಷಯದಲ್ಲಿ ಚೀನಾಕ್ಕೆ ಚೀನಾವೇ ಸಾಟಿ ಎಂದು ಅವರು ಹೇಳಿದರು.

‘‘ನನ್ನ ಪ್ರಕಾರ, 1930ರ ಬಳಿಕ ಈ ಮಾದರಿಯ ಮಾನವಹಕ್ಕು ಉಲ್ಲಂಘನೆಗಳನ್ನು ನಾವು ಯಾರೂ ನೋಡಿಲ್ಲ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಮಾನವಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಬ್ಯೂರೋದ ಮುಖ್ಯಸ್ಥ ಮೈಕಲ್ ಕೊಝಕ್ ಇದೇ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News