ಚೀನಾದ ಕೀಟನಾಶಕ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ; 47 ಸಾವು
Update: 2019-03-22 05:38 GMT
ಶಾಂಘೈ, ಮಾ.22: ಪಶ್ಚಿಮ ಚೀನಾದ ಚೆನ್ಜಿಗಾಂಗ್ ಕೈಗಾರಿಕಾ ಪ್ರಾಂಗಣದಲ್ಲಿರುವ ಕೀಟ ನಾಶಕ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ ಪರಿಣಾಮವಾಗಿ 47 ಮಂದಿ ಮೃತಪಟ್ಟು , 600ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಟೆಯಾನ್ಜೈ ಕೆಮಿಕಲ್ ಸಂಸ್ಥೆಗೆ ಸೇರಿದ ಘಟಕದಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹತ್ತಿಕೊಂಡಿದ್ದು, ಸಮೀಪದ ಕಾರ್ಖಾನೆಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ 640ಕ್ಕೂ ಅಧಿಕ ಮಂದಿಗೆ 16 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.