‘ತಪ್ಪಿತಸ್ಥ ಭಾವನೆ’ಯಿಂದ 2ನೇ ವಿದ್ಯಾರ್ಥಿ ಆತ್ಮಹತ್ಯೆ

Update: 2019-03-25 17:36 GMT

ವಾಶಿಂಗ್ಟನ್, ಮಾ. 25: ಫ್ಲೋರಿಡದ ಮಾರ್ಜರಿ ಸ್ಟೋನ್‌ ಮನ್ ಡಗ್ಲಸ್ ಹೈಸ್ಕೂಲ್ ‌ನಲ್ಲಿ ಗುಂಡು ಹಾರಾಟ ನಡೆದ ಒಂದು ವರ್ಷದ ಬಳಿಕ, ಆ ದಾಳಿಯಲ್ಲಿ ಬದುಕುಳಿದಿದ್ದ ಇನ್ನೋರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘‘ಶನಿವಾರ ಸಂಜೆ ವಿದ್ಯಾರ್ಥಿಯ ಸಾವು ಸಂಭವಿಸಿದೆ ಹಾಗೂ ತನಿಖೆ ಪ್ರಗತಿಯಲ್ಲಿದೆ’’ ಎಂದು ಕೋರಲ್ ಸ್ಪ್ರಿಂಗ್ಸ್ ಪೊಲೀಸ್ ವಕ್ತಾರರೊಬ್ಬರು ರವಿವಾರ ತಿಳಿಸಿದ್ದಾರೆ. ವಿದ್ಯಾರ್ಥಿಯ ಹೆಸರು, ವಯಸ್ಸು ಮತ್ತು ಲಿಂಗವನ್ನು ಬಹಿರಂಗಪಡಿಸಲಾಗಿಲ್ಲ.

2018 ಫೆಬ್ರವರಿ 14ರಂದು ಆ ಶಾಲೆಯಲ್ಲಿ ಹಳೆ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಒಂದು ವಾರದ ಹಿಂದೆ, ಆ ಹತ್ಯಾಕಾಂಡದಲ್ಲಿ ಬದುಕುಳಿದಿದ್ದ ವಿದ್ಯಾರ್ಥಿನಿಯೊಬ್ಬರು ತಪ್ಪಿತಸ್ಥ ಭಾವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News