ದಲಾಯಿ ಲಾಮಾ ಉತ್ತರಾಧಿಕಾರಿಗೆ ಚೀನಾದ ಅನುಮೋದನೆ ಬೇಕು: ಚೀನಾ

Update: 2019-04-10 18:23 GMT

ಬೀಜಿಂಗ್, ಎ. 10: ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾರ ಯಾವುದೇ ಉತ್ತರಾಧಿಕಾರಿ ನಮ್ಮ ಅನುಮೋದನೆ ಪಡೆಯಬೇಕು ಎಂದು ಚೀನಾ ಬುಧವಾರ ಹೇಳಿದೆ.
83 ವರ್ಷ ದಲಾಯಿ ಲಾಮಾರನ್ನು ಎದೆಯಲ್ಲಿ ಕಾಣಿಸಿಕೊಂಡಿರುವ ಸೋಂಕಿಗಾಗಿ ಹೊಸದಿಲ್ಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಿಸಿರುವ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆ ನೀಡಿದೆ.
ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ಅವರು ದಾಖಲಾಗಿರುವ ಆಸ್ಪತ್ರೆ ತಿಳಿಸಿದೆ.
ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ, ದಲಾಯಿ ಲಾಮಾರಿಗೆ ಉತ್ತರಾಧಿಕಾರಿಯನ್ನು ನೇಮಿಸುವ ಯೋಜನೆಯನ್ನು ಚೀನಾ ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್, ಮರುಜನ್ಮವ್ಯವಸ್ಥೆಯ ಮೂಲಕ ಆರಿಸಲಾದ ದಲಾಯಿ ಲಾಮಾರ ಉತ್ತರಾಧಿಕಾರಿಗೆ ಚೀನಾ ಸರಕಾರ ಅನುಮೋದನೆ ನೀಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News