'ಮತದಾರರು ಇಲ್ಲದಿದ್ದರೆ ನಕಲಿ ಮತ ಚಲಾಯಿಸಿ’: ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿಯ ಕರೆ!

Update: 2019-04-20 14:17 GMT

ಹೊಸದಿಲ್ಲಿ, ಎ.20: ನಕಲಿ ಮತದಾನ ನಡೆಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿರುವ ಉತ್ತರ ಪ್ರದೇಶದ ಬಡೌನ್ ನ ಬಿಜೆಪಿ ಅಭ್ಯರ್ಥಿ ಸಂಗಮಿತ್ರ ಮೌರ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭ್ಯರ್ಥಿಯ ವಿಡಿಯೋ ವೈರಲ್ ಆಗಿದ್ದು, ಮತದಾರರು ಮತದಾನದ ದಿನ ಸ್ಥಳದಲ್ಲಿ ಇಲ್ಲದಿದ್ದರೆ ನಕಲಿ ಮತದಾನ ಮಾಡಬೇಕು ಎಂದು ಹೇಳುವುದು ಕೇಳಿಸುತ್ತದೆ.

ಅಭ್ಯರ್ಥಿಯ ಈ ಮಾತಿಗೆ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟುತ್ತಾರೆ. ಮುಂದುವರಿದು ಮಾತನಾಡುವ ಅವರು, ಎಲ್ಲಾ ಮತದಾರರು ಮತದಾನ ಮಾಡಬೇಕು ಆದರೆ ಅದು ನಡೆಯದಿದ್ದಲ್ಲಿ, ನಕಲಿ ಮತದಾನವನ್ನು ಆಯ್ಕೆ ಮಾಡಬೇಕು. ನಕಲಿ ಮತದಾನ ಎಲ್ಲೆಡೆ ನಡೆಯುತ್ತದೆ. ನಿಮಗೆ ಅವಕಾಶ ಸಿಕ್ಕರೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳಿ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News