ಅಮೃತಸರದಲ್ಲಿ ಈ ಬಾಲಿವುಡ್ ಆ್ಯಕ್ಷನ್ ಹೀರೋ ಬಿಜೆಪಿ ಅಭ್ಯರ್ಥಿ?
Update: 2019-04-20 17:06 GMT
ಚಂಡೀಗಢ, ಎ.20: ಲೋಕಸಭಾ ಚುನಾವಣೆಯ ಎರಡನೆ ಹಂತದ ಮತದಾನ ಈಗಾಗಲೇ ನಡೆದಿದ್ದು, ಈ ನಡುವೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸೆಲೆಬ್ರಿಟಿಗಳ ಹಿಂದೆ ಬಿದ್ದಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಜಯಪ್ರದಾ ಮತ್ತು ಊರ್ಮಿಳಾ ಮಾತೋಂಡ್ಕರ್ ಕಣಕ್ಕಿಳಿದಿದ್ದಾರೆ.
ಇದೀಗ ಬಿಜೆಪಿಯು ಅಮೃತಸರದಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ರನ್ನು ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗುತ್ತಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಾಲಿವುಡ್ ಆ್ಯಕ್ಷನ್ ಹೀರೋನನ್ನು ಭೇಟಿಯಾಗಿದ್ದಾರೆ. ಈ ಭೇಟಿ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.
ಪಂಜಾಬ್ ನಲ್ಲಿ ಬಿಜೆಪಿ ಶಿರೋಮಣಿ ಅಕಾಲಿ ದಳದ ಜೊತೆ ಮೈತ್ರಿ ಮಾಡಿಕೊಂಡಿದೆ.