ಇಬ್ಬರು ಗರ್ಭಿಣಿಯರು, ಶಿಶುಗಳು ಸೇರಿ 20 ಫೆಲೆಸ್ತೀನಿಯರು ಮೃತ್ಯು

Update: 2019-05-06 17:09 GMT

ಗಾಝಾ, ಮೇ 6: ಇಸ್ರೇಲ್ ರವಿವಾರ ಫೆಲೆಸ್ತೀನ್‌ನ ಗಾಝಾದ ಮೇಲೆ ಭಾರೀ ಪ್ರಮಾಣದಲ್ಲಿ ವಾಯು ಮತ್ತು ಶೆಲ್ ದಾಳಿಗಳನ್ನು ನಡೆಸಿದ್ದು, ಕನಿಷ್ಠ 20 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಗರ್ಭಿಣಿ ಮಹಿಳೆಯರು ಮತ್ತು ಇಬ್ಬರು ಶಿಶುಗಳು ಸೇರಿದ್ದಾರೆ.

ಇದು 2014ರ ಯುದ್ಧದ ನಂತರದ ಅತಿ ಭೀಕರ ದಾಳಿಯಾಗಿದೆ.

ಮೃತರಲ್ಲಿ ಹಮಾಸ್ ಕಮಾಂಡರ್ ಹಮೀದ್ ಅಹ್ಮದ್ ಅಲ್-ಖೋಡರಿ ಸೇರಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ವಾಯು ದಾಳಿಯೊಂದರಲ್ಲಿ ಛಿದ್ರಗೊಂಡಿದೆ.

ಹಮಾಸ್ ಮತ್ತು ಇತರ ಬಂಡುಕೋರ ಗುಂಪುಗಳು ಶನಿವಾರದ ಬಳಿಕ ನಡೆಸಿದ 450ಕ್ಕೂ ಅಧಿಕ ರಾಕೆಟ್ ಮತ್ತು ಮೋರ್ಟರ್ ದಾಳಿಗಳಿಗೆ ಪ್ರತಿಯಾಗಿ ವಾಯು ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಈ ಪೈಕಿ 150ಕ್ಕೂ ಅಧಿಕ ರಾಕೆಟ್‌ಗಳನ್ನು ತುಂಡರಿಸಲಾಗಿದೆ ಎಂದು ಅದು ತಿಳಿಸಿದೆ.

ರಾಕೆಟ್ ಮತ್ತು ಮೋರ್ಟರ್ ದಾಳಿಗಳಲ್ಲಿ ಕನಿಷ್ಠ ನಾಲ್ವರು ಇಸ್ರೇಲಿಗರು ಮೃತಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News