ಜಪಾನ್‌ನಲ್ಲಿ ಪ್ರಬಲ ಭೂಕಂಪ: ಸುನಾಮಿಯಿಲ್ಲ
Update: 2019-05-10 18:36 GMT
ಟೋಕಿಯೊ (ಜಪಾನ್), ಮೇ 10: ದಕ್ಷಿಣ ಜಪಾನ್‌ನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 6.3ರ ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಹೇಳಿದೆ. ಆದರೆ, ಯಾವುದೇ ಸುನಾಮಿ ಬೆದರಿಕೆಯಿಲ್ಲ ಎಂದು ಜಪಾನ್ ಅಧಿಕಾರಿಗಳು ಹೇಳಿದ್ದಾರೆ.
ಮಿಯಾಝಕಿ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಪೆಸಿಫಿಕ್ ಸಾಗರದಲ್ಲಿ 24 ಕಿಲೋಮೀಟರ್ ಆಳದಲ್ಲಿ ಶುಕ್ರವಾರ ಬೆಳಗ್ಗೆ 8:48ಕ್ಕೆ ಭೂಕಂಪ ಸಂಭವಿಸಿತು ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ತಿಳಿಸಿದೆ.