ಚೀನಾ ಪರ ಕೆಲಸ ಮಾಡಿದ ಅಮೆರಿಕ ಬೇಹುಗಾರನಿಗೆ 20 ವರ್ಷ ಜೈಲು

Update: 2019-05-18 17:10 GMT

ವಾಶಿಂಗ್ಟನ್, ಮೇ 18: ಚೀನಾದ ಪರವಾಗಿ ಬೇಹುಗಾರಿಕೆ ನಡೆಸಿರುವುದಕ್ಕಾಗಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ಬೇಹುಗಾರನೊಬ್ಬನಿಗೆ ಶುಕ್ರವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಮೆರಿಕದ ರಹಸ್ಯ ‘ರಕ್ಷಣಾ ಮಾಹಿತಿ’ಯನ್ನು ಚೀನಾದ ಗುಪ್ತಚರ ಏಜಂಟ್ ಒಬ್ಬನಿಗೆ ಮಾರಾಟ ಮಾಡಿರುವುದಕ್ಕಾಗಿ 62 ವರ್ಷದ ಕೆವಿನ್ ಮ್ಯಾಲರಿ ಎಂಬವರಿಗೆ ಬೇಹುಗಾರಿಕೆ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

 2017ರ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಅವರು ಶಾಂಘೈ ಪ್ರವಾಸದಲ್ಲಿ ತೊಡಗಿದ್ದಾಗ 25,000 ಡಾಲರ್ (ಸುಮಾರು 17.58 ಲಕ್ಷ ರೂಪಾಯಿ) ಪಡೆದು ಮಾಹಿತಿ ರವಾನಿಸಿದ್ದರು ಎಂದು ಆರೋಪಿಸಲಾಗಿದೆ.

ಚೀನಿ ಭಾಷೆಯನ್ನು ಸುಲಲಿತವಾಗಿ ಮಾತಾಡಬಲ್ಲ ಕೆವಿನ್ ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ವಿದೇಶಾಂಗ ಇಲಾಖೆಯ ಭದ್ರತಾ ಸೇವೆಯಲ್ಲಿ ಸ್ಪೆಶಲ್ ಏಜಂಟ್ ಆಗಿದ್ದರು. ನಂತರ, ಸಿಐಎಯಲ್ಲಿ ರಹಸ್ಯ ಕೇಸ್ ಆಫಿಸರ್ ಆಗಿ ಕೆಲಸ ಮಾಡಿದ್ದರು.

ಬುದ್ಧ ಪೌರ್ಣಮಿ ಸಂದರ್ಭದಲ್ಲಿ ಶನಿವಾರ ಶ್ರೀಲಂಕಾ ರಾಜಧಾನಿ ಕೊಲಂಬೊದ ದೇವಾಲಯವೊಂದರಲ್ಲಿ ಬೌದ್ಧ ಭಕ್ತರು ವಿಶೇಷ ಪ್ರಾರ್ಥನೆಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News