ಭೂತಾನ್ ದೊರೆಯನ್ನು ಭೇಟಿಯಾದ ಜೈಶಂಕರ್

Update: 2019-06-08 17:45 GMT

   ಥಿಂಪು, ಜೂ.8: ಭೂತಾನ್‌ಗೆ ಭೇಟಿ ನೀಡಿರುವ ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್‌ಗೆಲ್ ವಾಂಗ್‌ಚುಕ್‌ರನ್ನು ಭೇಟಿಯಾದರು.

 ಗೌರವಾನ್ವಿತ ದೊರೆಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನಗೆ ದೊರೆತ ಗೌರವವಾಗಿದೆ. ಭೂತಾನ್ ದೇಶದ ಮುಖ್ಯಸ್ಥರ ಮಾರ್ಗದರ್ಶನದಿಂದ ಉಭಯ ದೇಶಗಳ ನಡುವಿನ ವಿಶೇಷ ಮೈತ್ರಿಗೆ ಸದಾಕಾಲ ಪ್ರಯೋಜನವಾಗಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

 ಅಲ್ಲದೆ ರಾಣಿ ಹಾಗೂ ರಾಜಕುಮಾರನನ್ನೂ ಭೇಟಿ ಮಾಡುವ ಅವಕಾಶ ಲಭಿಸಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ. ವಿದೇಶ ವ್ಯವಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೈಶಂಕರ್ ಭೇಟಿ ನೀಡಿರುವ ಪ್ರಥಮ ವಿದೇಶಿ ರಾಷ್ಟ್ರವಾಗಿದೆ ಭೂತಾನ್. ಶುಕ್ರವಾರ ಭೂತಾನ್ ಪ್ರಧಾನಿ ಲೋತ್ಸೆ ಶೆರಿಂಗ್‌ರನ್ನು ಭೇಟಿ ಮಾಡಿದ್ದ ಜೈಶಂಕರ್ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಭೂತಾನ್‌ನ ವಿದೇಶ ವ್ಯವಹಾರ ಸಚಿವ ತಾಂಡಿ ದೋರ್ಜಿಯನ್ನು ಭೇಟಿಯಾಗಿ ಜಲವಿದ್ಯುತ್ ಯೋಜನೆ ಹಾಗೂ ಸಹಭಾಗಿತ್ವ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ನೆರೆಹೊರೆ ಪ್ರಥಮ ಕಾರ್ಯನೀತಿಯಂತೆ ವಿದೇಶ ವ್ಯವಹಾರ ಸಚಿವರು ಪ್ರಥಮವಾಗಿ ನೆರೆಹೊರೆಯ ದೇಶಗಳಿಗೆ ಭೇಟಿ ನೀಡಿದ್ದು ಇದರಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ನಿಕಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News