ಸೌದಿ ವಿಮಾನ ನಿಲ್ದಾಣದ ಮೇಲೆ ಹೌದಿ ಬಂಡುಕೋರರ ದಾಳಿ: 26 ಮಂದಿ ಗಾಯ
Update: 2019-06-12 16:56 GMT
ದುಬೈ, ಜೂ. 12: ಸೌದಿ ಅರೇಬಿಯದ ಅಭಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಬೆಂಬಲಿತ ಹೌದಿ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಅರಬ್ ಮಿತ್ರಕೂಟ ಬುಧವಾರ ಹೇಳಿದೆ.
ಯೆಮನ್‌ನ ಅಂತರ್‌ರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ಅರಬ್ ಮಿತ್ರಕೂಟ ಬೆಂಬಲ ನೀಡುತ್ತಿದೆ.
ಕ್ಷಿಪಣಿ ದಾಳಿಯಿಂದಾಗಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 26 ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
ಈ ಪೈಕಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.