ಲಂಡನ್ ನೆಹರೂ ಕೇಂದ್ರದ ನಿರ್ದೇಶಕರಾಗಿ ಅಮೀಶ್ ತ್ರಿಪಾಠಿ
Update: 2019-06-21 16:50 GMT
ಲಂಡನ್, ಜೂ. 21: ಲೇಖಕ ಅಮೀಶ್ ತ್ರಿಪಾಠಿಯನ್ನು ಲಂಡನ್‌ನ ನೆಹರೂ ಕೇಂದ್ರದ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಗುರುವಾರ ಪ್ರಕಟಿಸಿದ್ದಾರೆ.
‘ಸೀಕ್ರೆಟ್ ಆಫ್ ದ ನಾಗಾಸ್’ ಮತ್ತು ‘ಸೀತಾ- ವಾರಿಯರ್ ಆಫ್ ಮಿಥಿಲಾ’ ಮುಂತಾದ ಜನಪ್ರಿಯ ಪುಸ್ತಕಗಳ ಲೇಖಕರಾಗಿರುವ ಅವರು ರಾಜತಾಂತ್ರಿಕ ಶ್ರೀನಿವಾಸ್ ಗೊಟ್ರು ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.