ಹಾಂಕಾಂಗ್: ನಾಯಕಿಯ ರಾಜೀನಾಮೆಗೆ ಆಗ್ರಹಿಸಿ ಮತ್ತೆ ಬೃಹತ್ ಧರಣಿ

Update: 2019-06-21 17:30 GMT

 ಹಾಂಕಾಂಗ್, ಜೂ. 21: ಹಾಂಕಾಂಗ್‌ನ ಚೀನಾ ಪರ ನಾಯಕಿ ಕ್ಯಾರೀ ಲ್ಯಾಮ್ ರಾಜೀನಾಮೆ ನೀಡಬೇಕು ಹಾಗೂ ಇತ್ತೀಚಿನ ಸರಕಾರ ವಿರೋಧಿ ಪ್ರತಿಭಟನೆಗಳ ವೇಳೆ ಬಂಧಿಸಲ್ಪಟ್ಟಿರುವ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸಾವಿರಾರು ಮಂದಿ ಹಾಂಕಾಂಗ್‌ನ ಪೊಲೀಸ್ ಪ್ರಧಾನಕಚೇರಿಯ ಎದುರು ಧರಣಿ ನಡೆಸಿದರು ಹಾಗೂ ಪ್ರಮುಖ ರಸ್ತೆಗಳಲ್ಲಿ ತಡೆ ಏರ್ಪಡಿಸಿದರು.

ಪ್ರತಿಭಟನಕಾರರ ಬೇಡಿಕೆಗಳನ್ನು ಈಡೇರಿಸಲು ಸರಕಾರ ನಿರಾಕರಿಸಿದ ಬಳಿಕ ನೂತನ ಪ್ರತಿಭಟನೆಗಳು ನಡೆದಿವೆ.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ನೀಡುವ ಮಸೂದೆಯೊಂದನ್ನು ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಸಂಸತ್ತಿನಲ್ಲಿ ಮಂಡಿಸಿರುವುದನ್ನು ವಿರೋಧಿಸಿ ಕಳೆದೆರಡು ವಾರಗಳಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಇತ್ತೀಚಿನ ಪ್ರತಿಭಟನೆಗಳ ವೇಳೆ ಜನರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಗಳ ಬಗ್ಗೆ ತನಿಖೆಯಾಗಬೇಕು ಹಾಗೂ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಪ್ರತಿಪಕ್ಷ ಗುಂಪುಗಳು ಆಗ್ರಹಿಸಿವೆ.

ಅದೇ ವೇಳೆ, ಲ್ಯಾಮ್ ಅಧಿಕಾರದಿಂದ ಕೆಳಗಿಳಿಯಬೇಕು ಹಾಗು ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂಬುದಾಗಿಯೂ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News