ಟ್ರಂಪ್ ಇರುವ ಶ್ವೇತಭವನಕ್ಕೆ ಹೋಗಲಾರೆ: ಅಮೆರಿಕ ಫುಟ್ಬಾಲ್ ಆಟಗಾರ್ತಿ

Update: 2019-06-27 18:27 GMT

ವಾಶಿಂಗ್ಟನ್, ಜೂ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಶ್ವೇತಭವನಕ್ಕೆ ನಾನು ಭೇಟಿ ನೀಡುವುದಿಲ್ಲ ಎಂಬುದಾಗಿ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಅಮೆರಿಕದ ಮಹಿಳಾ ಫುಟ್ಬಾಲ್ ತಂಡದ ಸದಸ್ಯೆ ಮೇಗನ್ ರ್ಯಾಪಿನೋ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಫುಟ್ಬಾಲ್ ಆಟಗಾರ್ತಿಯು ಶ್ವೇತಭವನಕ್ಕೆ ಅಗೌರವ ತೋರಿಸಿದ್ದಾರೆ ಎಂಬುದಾಗಿ ಬುಧವಾರ ಆರೋಪಿಸಿದ್ದಾರೆ.

‘‘ಮೇಗನ್ ನಮ್ಮ ದೇಶ, ಶ್ವೇತಭವನ, ನಮ್ಮ ಧ್ವಜದ ಬಗ್ಗೆ ಯಾವತ್ತೂ ಅಗೌರವ ತೋರಬಾರದು. ಯಾಕೆಂದರೆ, ಅವರು ಮತ್ತು ಅವರ ತಂಡಕ್ಕಾಗಿ ಈ ದೇಶ ಎಲ್ಲವನ್ನೂ ನೀಡಿದೆ. ನೀವು ಧರಿಸುವ ಧ್ವಜದ ಬಗ್ಗೆ ಅಭಿಮಾನ ಪಡಿ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘‘ನಾನು ಶ್ವೇತಭವನಕ್ಕೆ ಹೋಗುವುದಿಲ್ಲ’’ ಎಂಬುದಾಗಿ ಅಮೆರಿಕ ತಂಡದ ಉಪಾಧ್ಯಕ್ಷೆ ಹೇಳುವ ವೀಡಿಯೊವೊಂದು ‘ಏಯ್ಟೆ ಬೈ ಏಯ್ಟೆ’ ಫುಟ್ಬಾಲ್ ಮ್ಯಾಗಝಿನ್‌ನಲ್ಲಿ ಪ್ರಸಾರವಾಗಿದೆ.

ಫ್ರಾನ್ಸ್‌ನಲ್ಲಿ ಮಹಿಳಾ ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದೆ. ಹಾಲಿ ಚಾಂಪಿಯನ್ ಅಮೆರಿಕ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News