ಬಲೂಚಿಸ್ತಾನ ಲಿಬರೇಶನ್ ಆರ್ಮಿಯನ್ನು ಉಗ್ರ ಗುಂಪು ಎಂದು ಘೋಷಿಸಿದ ಅಮೆರಿಕ
Update: 2019-07-03 17:04 GMT
ವಾಶಿಂಗ್ಟನ್, ಜು. 3: ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಲೂಚಿಸ್ತಾನ ಲಿಬರೇಶನ್ ಆರ್ಮಿಯನ್ನು ಅಮೆರಿಕ ಮಂಗಳವಾರ ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸಿದೆ.
ಅದು ಚೀನಾದ ಹಿತಾಸಕ್ತಿಗಳನ್ನು ಗುರಿಯಾಗಿಸಿ ಮಾರಕ ದಾಳಿಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಬಲೂಚಿಸ್ತಾನ ಲಿಬರೇಶನ್ ಆರ್ಮಿಯನ್ನು ಜಾಗತಿಕ ಭಯೋತ್ಪಾದಕ ಗುಂಪು ಎಂಬುದಾಗಿ ಪರಿಗಣಿಸಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಾಗಾಗಿ, ಈ ಸಂಘಟನೆಗೆ ಸೇರಿದ ಯಾರಿಗಾದರೂ ಅಮೆರಿಕದಲ್ಲಿ ಯಾರಾದರೂ ನೆರವು ನೀಡುವುದು ಅಪರಾಧವಾಗಿರುತ್ತದೆ ಹಾಗೂ ಸಂಘಟನೆಯು ಅಮೆರಿಕದಲ್ಲಿ ಯಾವುದಾದರೂ ಸೊತ್ತುಗಳನ್ನು ಹೊಂದಿದ್ದರೆ ಅವುಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ.
ಬಲೂಚಿಸ್ತಾನದ ಬಂಡುಕೋರರ ವಿರುದ್ಧ ಪಾಕಿಸ್ತಾನವು 2004ರಿಂದ ಹೋರಾಟ ನಡೆಸುತ್ತಿದೆ.