ಪಾನ್ ಕಾರ್ಡ್‌ಗೆ ಬದಲಾಗಿ ಆಧಾರ್ ಕಾರ್ಡ್ ಬಳಸಬಹುದೇ?

Update: 2019-07-13 18:31 GMT

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪಾನ್ ಕಾರ್ಡ್‌ಗಳ ಜಾಗದಲ್ಲಿ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು ಎಂದಿದ್ದಾರೆ. ಆದರೆ ಆಧಾರ್ ಕಾರ್ಡ್ ಗಳನ್ನು ಬಳಸಲೇ ಬೇಕಾದಲ್ಲಿ ಪಾನ್ ಕಾರ್ಡ್ ಗಳನ್ನು ಬಳಸುವಂತಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನೀವು ಹಣಕಾಸು ವ್ಯವಹಾರಗಳಿಗೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್ ನಂಬರ್‌ಗಳನ್ನು ಬಳಸಬಹುದು ಆದರೆ ಕಲ್ಯಾಣ ಸೇವೆಗಳನ್ನು (ರೇಷನ್ ಅಕ್ಕಿ, ಆಹಾರ ಧಾನ್ಯಗಳು ಇತ್ಯಾದಿ) ಪಡೆಯುವಾಗ ಮತ್ತು ಯಾವ ಸನ್ನಿವೇಶದಲ್ಲಿ ಆಧಾರ್ ಕಡ್ಡಾಯವೋ ಅಲ್ಲಿ ನೀವು ಪಾನ್ ನಂಬರನ್ನು ಬಳಸಲು ಸಾಧ್ಯವಿಲ್ಲ.


ತನ್ನ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಾನು ಪಾನ್ ಕಾರ್ಡ್‌ನ ಜಾಗದಲ್ಲಿ ಆಧಾರ್ ಬಳಸುವಂತೆ ಮಾಡಲು ಉದ್ದೇಶಿಸಿರುವುದಾಗಿ ಹೇಳಿದರು. ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ನಂಬರ್‌ಗಳನ್ನು ಲಿಂಕ್ ಮಾಡಬೇಕೆಂದು ನಾಗರಿಕರನ್ನು ಬಲವಂತ ಮಾಡುವ ಸರಕಾರದ ಹಲವು ವರ್ಷಗಳ ಪ್ರಯತ್ನದ ಬಳಿಕ ಇಂತಹ ಒಂದು ಪ್ರಸ್ತಾವ ಬಂದಿದೆ. ಇವೆರಡನ್ನು ಜೋಡಿಸಿದಲ್ಲಿ ತೆರಿಗೆ ತಪ್ಪಿಸುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇವೆರಡೂ ಕಾರ್ಡ್ ಗಳನ್ನು ಪರಸ್ಪರ ‘‘ಒಂದರ ಬದಲು ಇನ್ನೊಂದನ್ನು ಬಳಸುವಂತೆ’’ (ಇಂಟರ್‌ಚೇಂಜೆಬಲ್) ಮಾಡಿದಲ್ಲಿ ಏನಾಗಬಹುದು?

ಮೊದಲನೆಯದಾಗಿ ಇವೆರಡೂ ಇಂಟರ್ ಚೇಂಜೆಬಲ್ ಹೌದೇ? ಈ ಪ್ರಶ್ನೆಗೆ ಉತ್ತರ: ಅಲ್ಲ. ಕನಿಷ್ಠ ಪಕ್ಷ ಸಂಪೂರ್ಣವಾಗಿಯಂತೂ ಅಲ್ಲ.
12 ಅಂಕಿಗಳ ಆಧಾರ್ ಕಾರ್ಡನ್ನು ಯಾವುದೇ ರೀತಿಯ ಗುರುತಿಗೆ (ಐಡೆಂಟಿಫಿಕೇಷನ್) ಅಥವಾ ದೃಢೀಕರಣಕ್ಕೆ ಬಳಸಿಕೊಳ್ಳಬಹುದು ಆದರೆ ಪಾನ್ ಕಾರ್ಡ್‌ಗಳಿಗೆ ಇದಕ್ಕಿಂತ ಹೆಚ್ಚು ನಿರ್ದಿಷ್ಟವಾದ ಬಳಕೆ, ಉಪಯೋಗ ಇದೆ.

ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ, 10 ಅಂಕಿಗಳ (ಪರ್ಮನೆಂಟ್ ಅಕೌಂಟ್ ನಂಬರ್) ಪಾನ್‌ಕಾರ್ಡನ್ನು ತೆರಿಗೆ ಕಣ್ಗಾವಲಿನ ಅಗತ್ಯ ಇರುವ ಪ್ರಮುಖ ಹಣಕಾಸು ವ್ಯವಹಾರಗಳಲ್ಲಿ ಬಳಸಬೇಕಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪಾನ್ ಕಾರ್ಡ್‌ಗಳ ಜಾಗದಲ್ಲಿ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು ಎಂದಿದ್ದಾರೆ. ಆದರೆ ಆಧಾರ್ ಕಾರ್ಡ್‌ಗಳನ್ನು ಬಳಸಲೇ ಬೇಕಾದಲ್ಲಿ ಪಾನ್ ಕಾರ್ಡ್‌ಗಳನ್ನು ಬಳಸುವಂತಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನೀವು ಹಣಕಾಸು ವ್ಯವಹಾರಗಳಿಗೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಆಧಾರ್ ನಂಬರ್‌ಗಳನ್ನು ಬಳಸಬಹುದು ಆದರೆ ಕಲ್ಯಾಣ ಸೇವೆಗಳನ್ನು (ರೇಷನ್ ಅಕ್ಕಿ, ಆಹಾರ ಧಾನ್ಯಗಳು ಇತ್ಯಾದಿ) ಪಡೆಯುವಾಗ ಮತ್ತು ಯಾವ ಸನ್ನಿವೇಶದಲ್ಲಿ ಆಧಾರ್ ಕಡ್ಡಾಯವೋ ಅಲ್ಲಿ ನೀವು ಪಾನ್ ನಂಬರನ್ನು ಬಳಸಲು ಸಾಧ್ಯವಿಲ್ಲ.

ಇದರ ಅರ್ಥ ನಾವು ಆಧಾರ್‌ನೊಂದಿಗೆ ಪಾನ್ ಕಾರ್ಡ್ ನಂಬರನ್ನು ಲಿಂಕ್ ಮಾಡಬೇಕಾಗಿಲ್ಲ ಎಂದಾಗುತ್ತದೆಯೇ? ಇಲ್ಲ. ಪಾನ್ ಆಧಾರ್ ಲಿಂಕಿಂಗ್ ಇನ್ನೂ ಕೂಡ ಕಡ್ಡಾಯ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ನಾವು ಇನ್ನೂ ಕೂಡ ನಮ್ಮ ಆಧಾರ್ ನಂಬರ್ ನಮೂದಿಸಲೇಬೇಕು. ಪಾನ್-ಆಧಾರ್ ಲಿಂಕ್ ಮಾಡಲು ಅಂತಿಮ ದಿನಾಂಕ ಸೆಪ್ಟ್ಟಂಬರ್ 30, 2019. ಈ ದಿನಾಂಕದೊಳಗಾಗಿ ನಮ್ಮ ಪಾನ್-ಆಧಾರ್‌ಗೆ ಲಿಂಕ್ ಆಗದಿದ್ದಲ್ಲಿ ಅದು ನಿಷ್ಕ್ರಿಯ (ಇನ್ ಆಪರೇಟಿವ್) ಆಗುವ ಅಪಾಯವಿದೆ. ಅದೇನೇ ಇದ್ದರೂ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆ ನೀಡುವುದು ಮತ್ತು ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್‌ಗೆ ಸೆಪ್ಟಂಬರ್ 30, 2019ರೊಳಗಾಗಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಆಧಾರ್ ಸಂಖ್ಯೆ ನೀಡಲೇ ಬೇಕೆಂಬುದನ್ನು ವಿರೋಧಿಸುವ ಕಾರ್ಯಕರ್ತರು ಸರಕಾರದ ಈ ಆಜ್ಞೆಯನ್ನು ಪ್ರಶ್ನಿಸಿದ್ದಾರೆ. ಇಂತಹ ಆಜ್ಞೆ ಅಸಾಂವಿಧಾನಿಕ ಎಂದು ವಾದಿಸಿರುವ ಅವರು ಪಾನ್ ಆಧಾರ್ ಜೋಡಣೆ ಐಚ್ಛಿಕವಾಗಬೇಕೆಂದು ಹೇಳಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದಾರೆ. ‘ಆಧಾರ್ ಪುನರ್‌ಚಿಂತನೆ’ (ರೀ ಥಿಂಕ್ ಆಧಾರ್) ಚಳವಳಿ ನಡೆಸುತ್ತಿರುವವರು, ತೆರಿಗೆ ಸಲ್ಲಿಸುವಾಗ ಆಧಾರ್ ಉಲ್ಲೇಖಿಸಿ ಪಾನ್ ಲಿಂಕ್ ಮಾಡಲೇ ಬೇಕೆಂಬುದನ್ನು ವಿರೋಧಿಸಿ ನೇರ ತೆರಿಗೆಯ ಕೇಂದ್ರೀಯ ಮಂಡಳಿಗೆ ಪತ್ರ ಬರೆಯಬೇಕೆಂದು ತೆರಿಗೆದಾರರಿಗೆ ಹೇಳಿದ್ದಾರೆ.

ಭಾರತದಲ್ಲಿ 1.2 ಬಿಲಿಯನ್ ಅಂದರೆ 120 ಕೋಟಿಗೂ ಅಧಿಕ ಜನರ ಬಳಿ ಆಧಾರ್ ಕಾರ್ಡ್ ಇದೆ ಆದರೆ 420 ಮಿಲಿಯ ಅಂದರೆ ನಲವತ್ತೆರಡು ಕೋಟಿ ಜನರ ಬಳಿ ಮಾತ್ರ ಪಾನ್ ಕಾರ್ಡ್ ಇದೆ. ಈ ಸೀಮಿತ ಪರಸ್ಪರ/ಅಂತರ್ ಬದಲಾವಣೆಯು ಆಧಾರ್ ಹೊಂದಿರುವ, ಆದರೆ ಪಾನ್ ಕಾರ್ಡ್ ಹೊಂದಿರದವರನ್ನು ಉದ್ದೇಶಿಸಿ ತಂದಿರುವ ಒಂದು ಕ್ರಮವಾಗಿದೆ. ‘‘ಪಾನ್‌ಗೆ ಲಿಂಕ್ ಮಾಡದ ಒಂದು ಆಧಾರ್ ಸಂಖ್ಯೆಯನ್ನು ಮಾತ್ರ ಉಲ್ಲೇಖಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರನಿಗೆ ಒಂದು ಹೊಸ ಪಾನ್ ನಂಬರ್ ನೀಡಲಾಗುತ್ತದೆ’’ ಎನ್ನುತ್ತಾರೆ ನೇರ ತೆರಿಗೆಯ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಪ್ರಮೋದ್ ಚಂದ್ರ ಮೋದಿ.

‘‘ಕೆಲವರು ಆಧಾರ್ ಬಳಸಲು, ಇನ್ನು ಕೆಲವರು ಪಾನ್ ಕಾರ್ಡ್ ಬಳಸಲು ಆದ್ಯತೆ ನೀಡಬಹುದು ಬಳಸಬಹುದು. ಆದರೆ ಅಂತಿಮವಾಗಿ, ಪ್ರತಿ ಆಧಾರ್ ಕಾರ್ಡ್‌ನ ಹಿಂದೆ ಒಂದು ಪಾನ್ ಕಾರ್ಡ್ ಇರುತ್ತದೆ ಮತ್ತು ಪ್ರತಿಯೊಂದು ಪಾನ್ ಕಾರ್ಡ್‌ನ ಹಿಂದೆ ಒಂದು ಆಧಾರ್ ಕಾರ್ಡ್ ಇರುತ್ತದೆ. ಪಾನ್ ಕಾರ್ಡ್‌ನ ಸಂಖ್ಯೆ 22 ಕೋಟಿಯಿಂದ 120 ಕೋಟಿಗೆ ಪರೋಕ್ಷವಾಗಿ ಹೆಚ್ಚುತ್ತದೆ; ವರ್ಧಿಸುತ್ತದೆ. ಯಾಕೆಂದರೆ ಪ್ರತಿಯೊಂದು ಪಾನ್ ಕಾರ್ಡ್ ಗೆ ಆಧಾರ್ ಸಮಾನವಾಗಿ ಬಿಟ್ಟಿದೆ ಅಥವಾ ಪರಸ್ಪರ ಅಂತರ/ವಿನಿಮಯ ಮಾಡಿಕೊಳ್ಳಬಹುದಾಗಿದೆ’’ ಎಂದಿದ್ದಾರೆ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ.

ಯಾರ ಬಳಿ ಆಧಾರ್ ಮತ್ತು ಪಾನ್ ಕಾರ್ಡ್ ಎರಡು ಇದೆಯೋ ಮತ್ತು ಯಾರು ಎರಡನ್ನೂ ಲಿಂಕ್ ಮಾಡಿಸಿದ್ದಾರೆ ಅಂಥಹವರಿಗೆ ವ್ಯವಹಾರ ಸುಲಭವಾಗುತ್ತದೆ. ಅಂಥಹವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದಾಗಿ ಅಥವಾ ಒಂದು ನಿರ್ದಿಷ್ಟ ಮೊತ್ತದ ಹಣಕಾಸು ವ್ಯವಹಾರ ನಡೆಸುವುವಾಗ ಸುಲಭವಾಗುತ್ತದೆ. ಯಾಕೆಂದರೆ ಅವರು ಎರಡರಲ್ಲಿ ಯಾವುದಾದರೂ ಒಂದನ್ನು ಉಲ್ಲೇಖಿಸಿದರೆ ಸಾಕು.

ಪಾನ್ ಕಾರ್ಡ್‌ಗಳು ಇಲ್ಲವಾಗುತ್ತವೆಯೇ? ಸದ್ಯಕ್ಕಂತೂ ಹಾಗೆ ಅನ್ನಿಸುವುದಿಲ್ಲ ‘‘ಪಾನ್ ಕಾರ್ಡ್ ಗಳನ್ನು ಬಳಕೆಯಿಂದ ರದ್ದುಗೊಳಿಸುವ ಯಾವುದೇ ಅವಶ್ಯಕತೆ ಇದೆ ಎಂದು ನನಗನ್ನಿಸುವುದಿಲ್ಲ. ಅದು ಜನರ ಆಯ್ಕೆಗೆ ಬಿಟ್ಟ ವಿಚಾರ. ಎಷ್ಟೆಂದರೂ, ಪಾನ್ ಕಾರ್ಡ್ ಬಳಸುವುದು ಹೆಚ್ಚು ಅನುಕೂಲಕರ ಎಂದು ತಿಳಿಯುವ ಜನರೂ ಸಾಕಷ್ಟಿದ್ದಾರೆ’’ ಎಂದಿದ್ದಾರೆ ಕಂದಾಯ ಕಾರ್ಯದರ್ಶಿ ಪಾಂಡೆ 

Writer - ಕೃಪೆ: scroll.in

contributor

Editor - ಕೃಪೆ: scroll.in

contributor

Similar News