ಸೌದಿ ದೊರೆಯ 96 ವರ್ಷದ ಸಹೋದರ ನಿಧನ

Update: 2019-07-29 16:31 GMT

ರಿಯಾದ್, ಜು. 29: ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಅಣ್ಣ ರಾಜಕುಮಾರ ಬಂದರ್ ಬಿನ್ ಅಬ್ದುಲಝೀಝ್ ಅಲ್-ಸೌದ್ ನಿಧನರಾಗಿದ್ದಾರೆ ಎಂದು ಸೌದಿ ಸರಕಾರ ಪ್ರಕಟಿಸಿದೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

‘‘ಸನ್ಮಾನ್ಯ ರಾಜಕುಮಾರ ಬಂದರ್ ಬಿನ್ ಅಬ್ದುಲಝೀಝ್ ಅಲ್-ಸೌದ್ ನಿಧನರಾಗಿದ್ದಾರೆ’’ ಎಂದು ರಾಜ ಆಸ್ಥಾನ ರವಿವಾರ ಬಿಡುಗಡೆ ಮಾಡಿದ ಕಿರು ಪಕ್ರಟನೆಯೊಂದು ತಿಳಿಸಿದೆ. ಅಧಿಕೃತ ಸೌದಿ ಪ್ರೆಸ್ ಏಜನ್ಸಿ ಸುದ್ದಿ ಸಂಸ್ಥೆಯಲ್ಲಿ ಈ ಪ್ರಕಟನೆ ಪ್ರಸಾರವಾಗಿದೆ.

ಮಕ್ಕಾದ ಪ್ರಧಾನ ಮಸೀದಿಯಲ್ಲಿ ಸೋಮವಾರ ಅಂತ್ಯಸಂಸ್ಕಾರ ಪ್ರಾರ್ಥನೆಯನ್ನು ನಡೆಸಲಾಗುವುದು’’ ಎಂದು ಪ್ರಕಟನೆ ಹೇಳಿದೆ.

ಅವರು ಸೌದಿ ಅರೇಬಿಯದ ಸ್ಥಾಪಕ ದೊರೆ ಅಬ್ದುಲಝೀಝ್‌ರ ಬದುಕುಳಿದಿದ್ದ ಅತಿ ಹಿರಿಯ ಮಗನಾಗಿದ್ದರು.

ಅವರ ಸಾವಿನ ಕಾರಣದ ಬಗ್ಗೆ ರಾಜ ಆಸ್ಥಾನ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಅವರು ಹಲವು ವರ್ಷಗಳಿಂದ ಕಾಯಿಲೆಪೀಡಿತರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News