ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ: ಭಾರತದ ಕ್ರಮಕ್ಕೆ ರಶ್ಯಾ ಬೆಂಬಲ

Update: 2019-08-10 12:02 GMT

ಹೊಸದಿಲ್ಲಿ, ಆ.10: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ಹಾಗೂ ಜಮ್ಮು ಕಾಶ್ಮೀರದ ಪುನರ್-ವಿಂಗಡಣೆ ನಡೆಸಿರುವ ಕೇಂದ್ರ ಸರಕಾರದ ಕ್ರಮವನ್ನು ರಶ್ಯಾ ಸಮರ್ಥಿಸಿದೆ.  ಭಾರತ ಸರಕಾರವು ಸಂವಿಧಾನದ ಚೌಕಟ್ಟಿನಲ್ಲಿಯೇ ಈ ಕ್ರಮ ಕೈಗೊಂಡಿದೆ ಎಂದು ರಷ್ಯಾ ಹೇಳಿದೆ.

ಭಾರತ ಸರಕಾರದ ಕ್ರಮದ ಕುರಿತಂತೆ ರಶ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಜಮ್ಮು ಕಾಶ್ಮೀರದ ಸ್ಥಾನಮಾನ ಬದಲಾವಣೆಯಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತೆರಳುವುದಕ್ಕೆ ಭಾರತ ಮತ್ತು ಪಾಕಿಸ್ತಾನ ದೇಶಗಳೆರಡರಡೂ  ಅನುಮತಿಸುವುದಿಲ್ಲ ಎಂದು ರಶ್ಯಾ ನಿರೀಕ್ಷಿಸುತ್ತದೆ'' ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಸಹಜ ಸ್ಥಿತಿಗೆ ಬರಬೇಕೆಂಬುದು ರಶ್ಯಾದ ಇಚ್ಛೆಯಾಗಿದೆ. ದ್ವಿಪಕ್ಷೀಯವಾಗಿ ರಾಜಕೀಯ ಹಾಗೂ ರಾಜತಾಂತ್ರಿಕ ಕ್ರಮಗಳ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು 1972ರ ಶಿಮ್ಲಾ ಒಪ್ಪಂದ ಹಾಗೂ 1999ರ ಲಾಹೋರ್ ಘೋಷಣೆಯಂತೆ ಪರಿಹಾರವಾಗಬೇಕು ಎಂದು ರಶ್ಯಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News