ಬಲೂಚಿಸ್ತಾನದಲ್ಲಿ ರಾಜಕಾರಣಿ ಸೇರಿ ನಾಲ್ವರ ಹತ್ಯೆ
Update: 2019-08-18 17:03 GMT
ಲಾಹೋರ್, ಆ. 18: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಶನಿವಾರ ಓರ್ವ ಹಿರಿಯ ರಾಜಕಾರಣಿ, ಅವರ ಮೊಮ್ಮಗ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಬಲೂಚಿಸ್ತಾನ ನ್ಯಾಶನಲ್ ಪಾರ್ಟಿ- ಮೆಂಗಲ್‌ನ ನಾಯಕ ಅಮಾನುಲ್ಲಾ ಝೆಹ್ರಿ ಶನಿವಾರ ಮುಂಜಾನೆ ತನ್ನ ನಿವಾಸಕ್ಕೆ ಹಿಂದಿರುಗುತ್ತಿದ್ದಾಗ, ಖೂಝ್ದಾರ್ ಜಿಲ್ಲೆಯಲ್ಲಿ ಅವರ ವಾಹನಗಳ ಸಾಲಿನ ಮೇಲೆ ಅಜ್ಞಾತ ಬಂದೂಕುಧಾರಿಗಳು ಗುಂಡಿನ ಸುರಿಮಳೆಗೈದರು ಎಂದು ಜಿಲ್ಲಾಧಿಕಾರಿ ಮೇಜರ್ ಮುಹಮ್ಮದ್ ತಿಳಿಸಿದರು.
‘‘ಝೆಹ್ರಿ, ಅವರ 14 ವರ್ಷದ ಮೊಮ್ಮಗ ಮತ್ತು ಇಬ್ಬರು ಅಂಗರಕ್ಷಕರು ಸ್ಥಳದಲ್ಲೇ ಮೃತಪಟ್ಟರು’’ ಎಂದರು.