ಹವಾಮಾನ ಚರ್ಚೆಯಿಂದ ತಪ್ಪಿಸಿಕೊಂಡ ಟ್ರಂಪ್
Update: 2019-08-26 17:53 GMT
ಬಿಯಾರಿಟ್ಝ್, ಆ. 26: ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗ ಸಭೆಯಲ್ಲಿ ಹವಾಮಾನ ಕುರಿತ ಚರ್ಚೆಯಲ್ಲಿ ಭಾಗವಹಿಸುವುದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಪ್ಪಿಸಿಕೊಂಡಿದ್ದಾರೆ.
ಸೋಮವಾರ ನಡೆದ ಹವಾಮಾನ, ಜೀವವೈವಿಧ್ಯ ಮತ್ತು ಸಾಗರಗಳು ಕುರಿತ ಅಧಿವೇಶನದಲ್ಲಿ ಟ್ರಂಪ್ ಭಾಗವಹಿಸುವುದು ನಿಗದಿಯಾಗಿತ್ತು. ಆದರೆ, ಸಭೆ ನಡೆಯುತ್ತಿರುವ ಸ್ಥಳಕ್ಕೆ ಹೋಗಲು ವರದಿಗಾರರಿಗೆ ಅವಕಾಶ ನೀಡಿದ ಹೊತ್ತಿನಲ್ಲಿ ಅವರ ಕುರ್ಚಿ ಖಾಲಿಯಾಗಿತ್ತು.
ಟ್ರಂಪ್ ಭಾಗವಹಿಸದಿದ್ದರೂ ಅವರ ಸಹಾಯಕರು ಇದ್ದರು ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದರು.
ಟ್ರಂಪ್‌ರ ಬೆಳಗ್ಗಿನ ದಿನಚರಿ ತಡವಾಗಿಯೇ ಆರಂಭಗೊಂಡಿತು. ಎಲ್ಲ ಸಭೆಗಳಲ್ಲಿ ಅವರು ತಡವಾಗಿ ಭಾಗವಹಿಸಿದರು. ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಜೊತೆಗಿನ ಅವರ ಸಭೆ ಎರಡು ಗಂಟೆ ತಡವಾಗಿ ಆರಂಭಗೊಂಡಿತು.