ಅಮೆರಿಕ, ಕೆನಡದಲ್ಲಿ 290 ಕೋಟಿ ಹಕ್ಕಿಗಳ ನಾಶ: ಅಧ್ಯಯನ

Update: 2019-09-20 18:08 GMT

ವಾಶಿಂಗ್ಟನ್, ಸೆ. 20: ಅಮೆರಿಕ ಮತ್ತು ಕೆನಡಗಳಲ್ಲಿ ಹುಲ್ಲುಗಾವಲುಗಳಿಂದ ಹಿಡಿದು ಸಮುದ್ರ ತೀರಗಳವರೆಗೆ, ಅರಣ್ಯಗಳಿಂದ ಹಿಡಿದು ಮನೆಯ ಹಿತ್ತಲಿನವರೆಗೆ ಹಕ್ಕಿಗಳು ಅತ್ಯಂತ ಅಪಾಯಕಾರಿ ವೇಗದಲ್ಲಿ ನಾಪತ್ತೆಯಾಗುತ್ತಿವೆ.

1970ರ ಬಳಿಕ 29 ಶೇಕಡ ಹಕ್ಕಿಗಳು ಕಣ್ಮರೆಯಾಗಿವೆ. ಅಂದರೆ 290 ಕೋಟಿಗಿಂತಲೂ ಅಧಿಕ ಹಕ್ಕಿಗಳು ಈಗ ಇಲ್ಲ ಎಂದು ವಿಜ್ಞಾನಿಗಳು ಗುರುವಾರ ಹೇಳಿದ್ದಾರೆ.

ಇದಕ್ಕೆ ಮಾನವ ಜನಸಂಖ್ಯೆಯೇ ಕಾರಣ ಎಂದು ಅವರು ಹೇಳಿದ್ದಾರೆ. ಮಾನವ ಜನಸಂಖ್ಯೆ ವೃದ್ಧಿಯಿಂದಾಗಿ ಹಕ್ಕಿಗಳ ವಾಸ ಸ್ಥಳಗಳ ನಾಶ, ಅರಣ್ಯ ನಾಶ, ಕೃಷಿ ರಾಸಾಯನಿಕಗಳ ವ್ಯಾಪಕ ಬಳಕೆ ಹಾಗೂ ಸಾಕು ಬೆಕ್ಕುಗಳ ಬೇಟೆ ಮುಂತಾದ ಅಂಶಗಳು ಇದಕ್ಕೆ ಕಾರಣ ಎಂದು ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನವೊಂದು ಹೇಳಿದೆ.

‘‘ಹಕ್ಕಿಗಳು ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿವೆ’’ ಎಂದು ಅಧ್ಯಯನದ ಸಹ ಲೇಖಕ ಹಾಗೂ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ಜಾರ್ಜ್‌ಟೌನ್ ಎನ್ವಿರಾನ್‌ಮೆಂಟ್ ಇನಿಶಿಯೇಟಿವ್‌ನ ನಿರ್ದೇಶಕ ಪೀಟರ್ ಮ್ಯಾರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News