ಟೆಕ್ಸಾಸ್: ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿಯ ಗುಂಡಿಕ್ಕಿ ಹತ್ಯೆ
Update: 2019-09-28 17:06 GMT
ಆಸ್ಟಿನ್ (ಅಮೆರಿಕ), ಸೆ. 28: ಅಮೆರಿಕದ ಟೆಕ್ಸಾಸ್ ರಾಜ್ಯದ ಪ್ರಥಮ ಪೇಟಧಾರಿ ಸಿಖ್ ಪೊಲೀಸ್ ಅಧಿಕಾರಿಯನ್ನು ಶುಕ್ರವಾರ ವಾಹನ ತಪಾಸಣೆಯ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ.
42 ವರ್ಷದ ಭಾರತ ಅಮೆರಿಕನ್ ಸಿಖ್ ಸಂದೀಪ್ ದಲಿವಾಲ್ ಓರ್ವ ಪುರುಷ ಮತ್ತು ಓರ್ವ ಮಹಿಳೆಯಿದ್ದ ವಾಹನವೊಂದನ್ನು ನಿಲ್ಲಿಸಿದಾಗ ಅವರ ಮೇಲೆ ದಾಳಿ ನಡೆಸಲಾಯಿತು. ವಾಹನದಲ್ಲಿದ್ದ ಇಬ್ಬರ ಪೈಕಿ ಒಬ್ಬರು ವಾಹನದಿಂದ ಇಳಿದು ಪೊಲೀಸ್ ಅಧಿಕಾರಿಯ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾರೆ ಎಂದು ಶೆರಿಫ್ ಎಡ್ ಗೊನ್ಸಾಲಿಸ್ ಸುದ್ದಿಗಾರರಿಗೆ ತಿಳಿಸಿದರು.
ಕೊಲೆಗೆ ಸಂಬಂಧಿಸಿ 47 ವರ್ಷದ ರಾಬರ್ಟ್ ಸೊಲಿಸ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಅವನ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ.
ಸಂದೀಪ್ ದಲಿವಾಲ್ 10 ವರ್ಷದ ಹಿಂದೆ ಟೆಕ್ಸಾಸ್ ಪೊಲೀಸ್ ಇಲಾಖೆಗೆ ಸೇರಿದ್ದರು.