ಬಿಬಿಸಿಯ ಹಿಜಾಬ್ ಧಾರಿ ಯುವ ಪತ್ರಕರ್ತೆ ಹನ್ನಾ ಯೂಸುಫ್ ನಿಧನ
Update: 2019-10-01 17:21 GMT
ಲಂಡನ್, ಅ. 1: ಯುವ ಬಿಬಿಸಿಯ ಯುವ ಪತ್ರಕರ್ತೆ ಹನ್ನಾ ಯೂಸುಫ್ 27ರ ಹರಯದಲ್ಲಿ ನಿಧನರಾಗಿದ್ದಾರೆ. ಹಿಜಾಬ್ ಧಾರಣೆಯನ್ನು ಸಮರ್ಥಿಸಿದ್ದ ಅವರು, ಅದು ‘ಸ್ತ್ರೀವಾದಿ ಧೋರಣೆ’ ಎಂದು ಬಣ್ಣಿಸಿದ್ದರು.
ಕೋಸ್ಟಾ ಕಾಫಿ ಕಂಪೆನಿಯ ನಿರ್ವಾಹಕರು ಉದ್ಯೋಗಿಗಳಿಗೆ ಅನಾರೋಗ್ಯ ರಜೆಯನ್ನು ನೀಡಲು ನಿರಾಕರಿಸುತ್ತಿದ್ದ ವಿಷಯವನ್ನು ಪತ್ತೆಹಚ್ಚಿ ಬಹಿರಂಗಪಡಿಸಿದ್ದರು.
ಹನ್ನಾ ಯೂಸುಫ್ ಬಿಬಿಸಿ ನ್ಯೂಸ್ ವೆಬ್‌ಸೈಟ್‌ಗೆ ಸುದ್ದಿಗಳನ್ನು ಬರೆದಿದ್ದಾರೆ, ಟಿವಿ ನ್ಯೂಸ್ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅದಕ್ಕೂ ಮೊದಲು ಅವರು ‘ಗಾರ್ಡಿಯನ್’, ಇಂಡಿಪೆಂಡೆಂಟ್ ಮತ್ತು ‘ಟೈಮ್ಸ್ ಪತ್ರಿಕೆಗ’ಳಲ್ಲಿ ಕೆಲಸ ಮಾಡ್ದಿದರು.
ಸೊಮಾಲಿಯದಲ್ಲಿ ಜನಿಸಿದ ಅವರು ಸೊಮಾಲಿ ಮತ್ತು ಅರೇಬಿಕ್ ಸೇರಿದಂತೆ 6 ಭಾಷೆಗಳನ್ನು ಮಾತನಾಡುತ್ತಿದ್ದರು.