ಹಾಂಕಾಂಗ್‌ನಲ್ಲಿ ರೈಲು ಸೇವೆಗಳು ಸ್ಥಗಿತ
Update: 2019-10-05 15:25 GMT
ಹಾಂಕಾಂಗ್, ಅ. 5: ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಸೇರಿದಂತೆ, ಹಾಂಕಾಂಗ್‌ನ ಎಲ್ಲ ರೈಲು ಸೇವೆಗಳನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ ಎಂದು ನಗರದ ರೈಲು ನಿರ್ವಾಹಕ ಸಂಸ್ಥೆ ತಿಳಿಸಿದೆ.
ಪ್ರಜಾಪ್ರಭುತ್ವಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು ಸಬ್‌ವೇ ಸ್ಟೇಶನ್‌ಗಳಲ್ಲಿ ಪ್ರತಿಭಟನಕಾರರು ದಾಂಧಲೆಯೆಬ್ಬಿಸಿದ ಬಳಿಕ ರೈಲು ಕಂಪೆನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
‘‘ಏರ್‌ಪೋರ್ಟ್ ಎಕ್ಸ್‌ಪ್ರೆಸ್, ಲೈಟ್ ರೈಲ್ ಮತ್ತು ಎಂಟಿಆರ್ ಬಸ್ ಸೇರಿದಂತೆ ಹೆವಿ ರೈಲ್‌ನಲ್ಲಿ ಓಡುವ ಎಲ್ಲ ಎಂಟಿಆರ್ ಸೇವೆಗಳನ್ನು ಇಂದು ಬೆಳಗ್ಗೆ ಪುನರಾರಂಭಿಸಲು ಸಾಧ್ಯವಾಗಿಲ್ಲ’’ ಎಂದು ಎಂಟಿಆರ್ ಕಾರ್ಪೊರೇಶನ್ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.