ರಫೇಲ್ ಶಸ್ತ್ರಪೂಜೆಯನ್ನು ಸಮರ್ಥಿಸಿ ರಾಜನಾಥ್ ಸಿಂಗ್ ಬೆಂಬಲಕ್ಕೆ ನಿಂತ ಪಾಕ್ ಸೇನಾ ವಕ್ತಾರ
Update: 2019-10-11 08:12 GMT
ಇಸ್ಲಾಮಾಬಾದ್, ಅ.11: ಮೊದಲ ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಹಸ್ತಾಂತರಿಸಿದ ವೇಳೆ ಅದಕ್ಕೆ ಶಸ್ತ್ರ ಪೂಜೆ ನೆರವೇರಿಸಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವಾದಕ್ಕೀಡಾಗಿದ್ದರೆ, ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್ ಅವರು ರಾಜನಾಥ್ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
"ರಫೇಲ್ ಪೂಜೆಯಲ್ಲಿ ತಪ್ಪೇನಿಲ್ಲ, ಅದು ಧರ್ಮದಂತೆ ನಡೆದಿದೆ ಹಾಗೂ ಅದನ್ನು ಗೌರವಿಸಬೇಕಿದೆ. ನೆನಪಿಡಿ ಯಂತ್ರ ಮಾತ್ರವಲ್ಲ, ಅದರ ಸಾಮರ್ಥ್ಯ, ಸ್ಪರ್ಧಾತ್ಮಕತೆ ಹಾಗೂ ಅದನ್ನು ನಿರ್ವಹಿಸುವ ಮಂದಿಯ ಬದ್ಧತೆಯೂ ಪ್ರಮುಖವಾಗುತ್ತದೆ. ಪಿಎಎಫ್ ಶಹೀನ್ ಗಳ ಬಗ್ಗೆ ಹೆಮ್ಮೆಯಿದೆ'' ಎಂದು ಗಫೂರ್ ಟ್ವೀಟ್ ಮಾಡಿದ್ದಾರೆ.