ದಿಲ್ಲಿ: ವಾಯು ಗುಣಮಟ್ಟ ಮತ್ತಷ್ಟು ಕುಸಿತ

Update: 2019-10-13 16:30 GMT

ಹೊಸದಿಲ್ಲಿ, ಅ.13: ದಿಲ್ಲಿಯಲ್ಲಿ ವಾಯು ಗುಣಮಟ್ಟ ಸತತ ನಾಲ್ಕನೇ ದಿನವೂ ‘ಅತ್ಯಂತ ಕಳಪೆ’ ಶ್ರೇಣಿಯಲ್ಲೇ ಮುಂದುವರಿದಿದ್ದು, ನೆರೆಯ ರಾಜ್ಯಗಳಲ್ಲಿ ಬೆಳೆತ್ಯಾಜ್ಯ ಸುಡುತ್ತಿರುವುದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿಲ್ಲಿಯ ನೆರೆರಾಜ್ಯಗಳಾದ ಪಂಜಾಬ್ ಮತ್ತು ಹರ್ಯಾನದಲ್ಲಿ ಕಳೆದೆರಡು ದಿನಗಳಿಂದ ಬೆಳೆ ತ್ಯಾಜ್ಯ ಸುಡುವ ಪ್ರಮಾಣ ಹೆಚ್ಚಿದೆ. ದಿಲ್ಲಿಯತ್ತ ಗಾಳಿ ಬೀಸುವುದರಿಂದ ಈ ಹೊಗೆ ದಿಲ್ಲಿಯನ್ನು ಆವರಿಸುತ್ತಿದೆ. ಮುಂದಿನ ಹಲವು ದಿನ ಈ ಸಮಸ್ಯೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಲ್ಲಿಯ ವಾಯು ಗುಣಮಟ್ಟ ಕಳೆದ ಮೂರು ತಿಂಗಳಲ್ಲೇ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ಕಳಪೆ ಮಟ್ಟ ತಲುಪಿತ್ತು. ಕಳೆದ ನಾಲ್ಕು ದಿನದಿಂದ ಅತ್ಯಂತ ಕಳಪೆ ಮಟ್ಟ ತಲುಪಿದೆ. ಹರ್ಯಾನದಲ್ಲಿ ಬೆಳೆತ್ಯಾಜ್ಯ ಸುಡುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿಷೇಧ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News