ಬ್ರೆಕ್ಸಿಟ್ ವಿಳಂಬದ ಪರವಾಗಿ ಬ್ರಿಟನ್ ಸಂಸತ್ತು ಮತ

Update: 2019-10-23 17:46 GMT

ಲಂಡನ್, ಅ. 23: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವುದಕ್ಕೆ (ಬ್ರೆಕ್ಸಿಟ್) ಸಂಬಂಧಿಸಿದ ಪ್ರಧಾನಿ ಬೊರಿಸ್ ಜಾನ್ಸನ್‌ರ ಒಪ್ಪಂದದ ಕ್ಷಿಪ್ರ ವೇಳಾಪಟ್ಟಿಯನ್ನು ಬ್ರಿಟಿಶ್ ಸಂಸತ್ತು ಮಂಗಳವಾರ ತಿರಸ್ಕರಿಸಿದೆ. ಇದರೊಂದಿಗೆ ಬ್ರೆಕ್ಸಿಟ್ ಅನಿಶ್ಚಿತತೆಗೆ ಗುರಿಯಾಗಿದೆ.

ಪ್ರಸಕ್ತ ಅಕ್ಟೋಬರ್ 31ರ ಬ್ರೆಕ್ಸಿಟ್ ಗಡುವು ಸಮೀಪಿಸುತ್ತಿರುವಂತೆಯೇ, ಅದರ ಸಾಧ್ಯತೆ ಬಗ್ಗೆ ಅನಿಶ್ಚಿತತೆ ತಲೆದೋರಿದೆ.

 ಇದಕ್ಕೂ ಮೊದಲು, ಜಾನ್ಸನ್‌ರ ಬ್ರೆಕ್ಸಿಟ್ ಒಪ್ಪಂದ ಎರಡನೇ ಬಾರಿ ಮತದಾನಕ್ಕೆ ಬಂದಾಗ ಬ್ರಿಟನ್ ಸಂಸತ್ತು 329-299ರ ಅಂತರದಲ್ಲಿ ಅಂಗೀಕಾರ ನೀಡಿತು. ಇದು ಜಾನ್ಸನ್‌ಗೆ ಲಭಿಸಿದ ಅಭೂತಪೂರ್ವ ವಿಜಯವಾಗಿದೆ.

ಆದರೆ, ನಿಮಿಷಗಳ ಬಳಿಕ, ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿ ಮೂರು ದಿನಗಳ ಅವಧಿಯಲ್ಲಿ ಅಂಗೀಕರಿಸಬೇಕು ಎಂಬ ಮಸೂದೆಯನ್ನು ಪ್ರಧಾನಿ ಮಂಡಿಸಿದಾಗ ಸಂಸದರು 322-308 ಮತಗಳ ಅಂತರದಿಂದ ತಿರಸ್ಕರಿಸಿದರು.

‘‘ಬ್ರೆಕ್ಸಿಟ್ ಮುಂದೂಡಿಕೆಯ ಪರವಾಗಿ ಸಂಸತ್ತು ಮತ್ತೆ ಮತ ಹಾಕಿರುವ ಬಗ್ಗೆ ನನಗೆ ನಿರಾಶೆಯಾಗಿದೆ’’ ಎಂದು ಜಾನ್ಸನ್ ಸಂಸತ್ತಿನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News