ಟಾಕ್‌ ಶೋಗಳಲ್ಲಿ ನಿರೂಪಕರು ತಮ್ಮ ಅನಿಸಿಕೆ ವ್ಯಕ್ತಪಡಿಸಬಾರದು: ಪಾಕ್ ಟಿವಿ ವಾಹಿನಿಗಳಿಗೆ ಕಟ್ಟುನಿಟ್ಟಿನ ಆದೇಶ

Update: 2019-10-28 17:49 GMT

ವಾಶಿಂಗ್ಟನ್,ಅ.28: ಪಾಕಿಸ್ತಾನದಲ್ಲಿ ಟಿವಿ ಕಾರ್ಯಕ್ರಮ ನಿರೂಪಕರು , ಟಾಕ್‌ ಶೋಗಳ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು ಹಾಗೂ ಕಾರ್ಯಕ್ರಮದಲ್ಲಿ ಅವರ ಪಾತ್ರವು ನಿರೂಪಣೆಗಷ್ಟೇ ಸೀಮಿತವಾಗಿರಬೇಕು ಎಂದು ಆ ದೇಶದ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಸಮಿತಿ ತಿಳಿಸಿದೆ.

ನಿರೂಪಕರು, ಟಿವಿವಾಹಿನಿಗಳು ಸೇರಿದಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನಿಯಮಿತವಾಗಿ ಪ್ರಸಾರವಾಗುವ ಸಂವಾದ ಕಾರ್ಯಕ್ರಮಗಳಲ್ಲಿ ನಿರೂಪಕರು ತಜ್ಞರ ಹಾಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಎಂಬ ಆದೇಶವನ್ನು ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು (ಪಿಇಆರ್‌ಎಂಎ)ಜಾರಿಗೊಳಿಸಿದೆಯೆದು ರವಿವಾರ ಡಾನ್ ಸುದ್ದಿ ಪತ್ರಿಕೆ ವರದಿ ಮಾಡಿದೆ.

   ಪಿಇಆರ್‌ಎಂಎ ಜಾರಿಗೊಳಿಸಿರುವ ಈ ನೀತಿ ಸಂಹಿತೆಯ ಪ್ರಕಾರ, ನಿರೂಪಕರ ಪಾತ್ರವು ಕಾರ್ಯಕ್ರಮಗಳನ್ನು ವಸ್ತುನಿಷ್ಠವಾಗಿ, ಪಕ್ಷಪಾತರಹಿತವಾಗಿ ಹಾಗೂ ಪೂರ್ವಾಗ್ರಹ ರಹಿತವಾಗಿ ನಿರೂಪಣೆ ಮಾಡುವುದಾಗಿದೆ.

 ಟಾಕ್ ಶೋಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳನ್ನು ಆಯ್ಕೆ ಮಾಡುವಾಗ ಅತ್ಯಂತ ಜಾಗರೂಕತೆ ವಹಿಸಬೇಕು ಹಾಗೂ ಅವರಿಗೆ ನಿರ್ದಿಷ್ಟ ವಿಷಯದ ಬಗ್ಗೆ ಉತ್ತಮ ಜ್ಞಾನ ಹಾಗೂ ಪರಿಣತಿ ಇರುವುದನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕೆಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News