ಲೆಬನಾನ್: ಪ್ರತಿಭಟನೆಗೆ ಮಣಿದು ಹರೀರಿ ಸರಕಾರ ರಾಜೀನಾಮೆ
Update: 2019-10-30 17:18 GMT
ಬೈರೂತ್ (ಲೆಬನಾನ್), ಅ. 30: ಭ್ರಷ್ಟಾಚಾರ ಮತ್ತು ವಿಭಜನೆವಾದದ ವಿರುದ್ಧ ಸುಮಾರು ಎರಡು ವಾರಗಳ ಕಾಲ ನಡೆದ ಅಭೂತಪೂರ್ವ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಮಣಿದಿರುವ ಲೆಬನಾನ್ ಪ್ರಧಾನಿ ಸಅದ್ ಹರೀರಿ, ಮಂಗಳವಾರ ತನ್ನ ಸರಕಾರದ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಟೆಲಿವಿಶನ್‌ನಲ್ಲಿ ಹರೀರಿ ರಾಜೀನಾಮೆ ಘೋಷಣೆಯನ್ನು ಮಾಡಿದಾಗ, ಪ್ರತಿಭಟನಕಾರರು ಹರ್ಷೋದ್ಗಾರಗಳನ್ನು ಮಾಡಿದರು.
ಜನರು ಅಕ್ಟೋಬರ್ 17ರಿಂದ ಸಂಘಟಿತರಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
‘‘ಬಿಕ್ಕಟ್ಟನ್ನು ನಿಭಾಯಿಸಲು ದೊಡ್ಡ ಆಘಾತವೊಂದನ್ನು ನೀಡುವುದು ನಮಗೆ ಅಗತ್ಯವಾಗಿದೆ. ನನ್ನ ಸರಕಾರದ ರಾಜೀನಾಮೆಯನ್ನು ಸಲ್ಲಿಸಲು ನಾನು ಬಾಬ್ಡಾ ಅರಮನೆಗೆ ಹೋಗುತ್ತಿದ್ದೇನೆ’’ ಎಂದು ಹರೀರಿ ಹೇಳಿದರು.