ಖ್ಯಾತ ಭಾರತೀಯ ಶೆಫ್ ಕೊರೋನ ವೈರಸ್‌ಗೆ ಬಲಿ

Update: 2020-03-26 03:59 GMT

ಹೊಸದಿಲ್ಲಿ : ಮುಂಬೈನ ಜನಪ್ರಿಯ ದಿ ಬಾಂಬೆ ಕ್ಯಾಂಟೀನ್ ಮತ್ತು ಓ ಪೆಡ್ರೊ ಹೋಟೆಲ್ ಮಾಲಕ ಹಾಗೂ ವಿಶ್ವವಿಖ್ಯಾತ ಭಾರತೀಯ ಶೆಫ್ ಫ್ಲಾಯ್ಡ್ ಕಾರ್ಡೋಝ್ ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಹಂಗರ್ ಇನ್‌ಕಾರ್ಪೊರೇಷನ್ ಹಾಸ್ಪಿಟಾಲಿಟಿಯ ಶೆಫ್ ಫ್ಲಾಯ್ಡ್ ಕಾರ್ಡೋಝ್ ಅಮೆರಿಕದ ನ್ಯೂಜೆರ್ಸಿಯಲ್ಲಿ ಮಾ. 25ರಂದು ಕೊನೆಯುಸಿರೆಳೆದಿದ್ದಾರೆ ಎಂದು ತೀವ್ರ ವಿಷಾದದಿಂದ ಪ್ರಕಟಿಸುತ್ತಿದ್ದೇವೆ. ಅವರು ತಾಯಿ ಬ್ರೆಯಿಲ್, ಪತ್ನಿ ಬರ್ಖಾ, ಮಕ್ಕಳಾದ ಜಸ್ಟಿನ್ ಹಾಗೂ ಪೀಟರ್ ಅವರನ್ನು ಅಗಲಿದ್ದಾರೆ. ಮಾ.18ರಂದು ಅವರಿಗೆ ಕೋವಿಡ್-18 ಸೋಂಕು ತಗುಲಿತ್ತು. ಬಳಿಕ ನ್ಯೂಜೆರ್ಸಿಯ ಮೌಂಟ್‌ಸೈಡ್ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹಂಗರ್ ಇನ್‌ಕಾರ್ಪೊರೇಷನ್ ಹಾಸ್ಪಿಟಾಲಿಸಿಯ ಹೇಳಿಕೆ ವಿವರಿಸಿದೆ.

ಮಾ. 18ರಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾರ್ಡೋಝ್ ನನಗೆ ತೀವ್ರ ಜ್ವರ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನ್ಯೂಯಾರ್ಕ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ಬರೆದಿದ್ದರು. ದಿ ಬಾಂಬೆ ಕ್ಯಾಂಟೀನ್ ಹಾಗೂ ಓ ಪೆಡ್ರೊ ಹೋಟೆಲ್ ನಡೆಸುತ್ತಿದ್ದ ಕಾರ್ಡೋಜಾ ಇತ್ತೀಚೆಗೆ ತಮ್ಮ ಮೂರನೇ ಉದ್ಯಮ ಬಾಂಬೆ ಸ್ವೀಟ್ ಶಾಪ್ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News