ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಎಪ್ರಿಲ್ 14ರವರೆಗೆ ಮುಂದೂಡಿಕೆ
Update: 2020-03-26 14:37 GMT
ಹೊಸದಿಲ್ಲಿ: ಕೊರೋನವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ಎಪ್ರಿಲ್ 14ರವರೆಗೆ ಮುಂದುವರಿಯಲಿದೆ ಎಂದು ಸರಕಾರ ಘೋಷಿಸಿದೆ.
ಕಳೆದ ವಾರ ಘೋಷಿಸಲಾಗಿದ್ದ ಒಂದು ವಾರಗಳ ನಿರ್ಬಂಧವನ್ನು ಮುಂದೂಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಕಾರ್ಗೊ ವಿಮಾನಗಳು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಪಡೆದ ವಿಶೇಷ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.
ದೇಶಿಯ ವಿಮಾನಗಳ ಮೇಲೆ ಮಾರ್ಚ್ 31ರವರೆಗೆ ನಿಷೇಧ ಹೇರಲಾಗಿದೆ.