ಲಾಕ್ ಡೌನ್‍ನಿಂದ ದೇಶದ ಆರ್ಥಿಕತೆಗೆ 18 ಲಕ್ಷ ಕೋಟಿ ರೂ. ನಷ್ಟ: ಬಾರ್ಕ್‍ಲೇಸ್

Update: 2020-04-14 16:13 GMT

ಹೊಸದಿಲ್ಲಿ: ಕೊರೋನ ವೈರಸ್ ಹರಡುವಿಕೆಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಭಾರತದಲ್ಲಿ ಮೇ 3ರ ತನಕ ಲಾಕ್ ಡೌನ್ ವಿಸ್ತರಿಸಿರುವುದರಿಂದ ಇದು ದೇಶದ ಆರ್ಥಿಕತೆಗೆ ರೂ. 18 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 8.1ರಷ್ಟು ನಷ್ಟ ಉಂಟು ಮಾಡಲಿದೆ ಎಂದು ಬ್ರಿಟಿಷ್ ಬ್ರೋಕರೇಜ್ ಸಂಸ್ಥೆ ಬಾರ್ಕ್‍ಲೇಸ್ ಹೇಳಿದೆ.

ಆರ್ಥಿಕ ವರ್ಷ 2020-21ಗೆ ಸಂಸ್ಥೆಯು ಪ್ರಗತಿ ಪ್ರಮಾಣ ಅಂದಾಜನ್ನು ಈ ಹಿಂದಿನ ಶೇ 3.5ರಿಂದ ಶೇ 0.8ಕ್ಕೆ ಕಡಿತಗೊಳಿಸಿದೆ. ಕೈಗಾರಿಕೆಗಳು ಹೆಚ್ಚಿರುವ ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳು ಲಾಕ್ ಡೌನ್‍ನಿಂದ ದೊಡ್ಡ ಮಟ್ಟದ  ನಷ್ಟ ಅನುಭವಿಸಲಿವೆ, ಈ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್-19 ಪ್ರಕರಣಗಳು ಹೆಚ್ಚಿವೆ. ದೇಶದ ಇತರೆಡೆಗಳಿಗೆ ಹೋಲಿಸಿದಾಗ ಇಲ್ಲಿ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ,'' ಎಂದು ಸಂಸ್ಥೆ ಹೇಳಿದೆ.

ಇಂದು ಮುಕ್ತಾಯಗೊಳ್ಳಲಿದ್ದ 21 ದಿನಗಳ ಲಾಕ್ ಡೌನ್ ಅನ್ನು ಮೇ 3ರ ತನಕ ಪ್ರಧಾನಿ ನರೇಂದ್ರ ಮೋದಿ ವಿಸ್ತರಿಸಿ ಘೋಷಿಸಿದ ಬೆನ್ನಲ್ಲೇ ಸಂಸ್ಥೆಯ  ಮೇಲಿನ ಹೇಳಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News