ಕೊರೋನದಿಂದ ಶೇ. 1.6ಕ್ಕೆ ಕುಸಿಯಲಿರುವ ಭಾರತದ ಆರ್ಥಿಕ ಪ್ರಗತಿ ?

Update: 2020-04-15 04:11 GMT

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡ 1.9ಕ್ಕೆ ಕುಸಿಯಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಅಂದಾಜಿಸಿದೆ. ವಿನಾಶಕಾರಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಾಗತಿಕ ಪ್ರಗತಿದರವೂ ಶೇಕಡ 3ಕ್ಕೆ ಇಳಿಯಲಿದೆ ಎಂದು ಐಎಎಂಎಫ್ ಹೇಳಿದೆ.

ಭಾರತದ ಆರ್ಥಿಕ ಪ್ರಗತಿಯ ನಿರೀಕ್ಷಿತ ದರ ಆರ್ಥಿಕ ತಜ್ಞರು ಹಾಗೂ ಹೂಡಿಕೆ ಬ್ಯಾಂಕ್‍ಗಳ ಅಂದಾಜಿಗೆ ನಿಕಟವಾಗಿದೆ. ಭಾರತದ ಆರ್ಥಿಕ ಪ್ರಗತಿ 30 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಶೇಕಡ 1.6ಕ್ಕೆ ಕುಸಿಯಲಿದೆ ಎಂದು ಗೋಲ್ಡ್‍ಮನ್ ಸ್ಯಾಚ್ಸ್ ಅಂದಾಜಿಸಿದೆ. ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ ಭಾರತದ ಪ್ರಗತಿ, ಸಾಂಕ್ರಾಮಿಕ ಎಷ್ಟು ದೀರ್ಘ ಅವಧಿಯವರೆಗೆ ಇರುತ್ತದೆ ಎನ್ನುವುದನ್ನು ಆಧರಿಸಿ ಶೇಕಡ 1.5ರಿಂದ 2.8ರ ಆಸುಪಾಸಿನಲ್ಲಿ ಇರಲಿದೆ.

ಇಷ್ಟಾಗಿಯೂ ಐಎಂಎಫ್ ಅಂದಾಜಿನ ಪ್ರಕಾರ ಭಾರತ ವೇಗವಾಗಿ ಪ್ರಗತಿ ಹೊಂದುವ ಪ್ರಮುಖ ಆರ್ಥಿಕತೆಗಳ ಪೈಕಿ ಒಂದಾಗಲಿದ್ದು, 1991ರ ಬಳಿಕ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ಸಂಕಷ್ಟದ ಬಳಿಕ ಇದು ಭಾರತದ ಅತ್ಯಂತ ನಿಧಾನ ಪ್ರಗತಿಯಾಗಲಿದೆ. ಮಂಗಳವಾರ ಇತ್ತೀಚಿನ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದ್ದು, ಚೀನಾ 2020-21ರಲ್ಲಿ ಶೇಕಡ 1.2ರ ದರದಲ್ಲಿ ಪ್ರಗತಿ ಸಾಧಿಸಲಿದೆ. ಮುಂದಿನ ವರ್ಷ ಅಭಿವೃದ್ಧಿ ವೇಗ 9.2%ಕ್ಕೇರಲಿದೆ. ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದಲ್ಲಿ ಭಾರತದ ಪ್ರಗತಿ ಮುಂದಿನ ಹಣಕಾಸು ವರ್ಷದಲ್ಲಿ 7.4% ಆಗಬಹುದು ಎಂದು ಅಂದಾಜಿಸಲಾಗಿದೆ.

ಬರ್ ಕ್ಲೇ ಅರ್ಥಶಾಸ್ತ್ರಜ್ಞರ ಪ್ರಕಾರ ಭಾರತದ ಪ್ರಗತಿ ಇನ್ನೂ ನಿರಾಶಾದಾಯಕವಾಗಲಿದ್ದು, 2020ನೇ ವರ್ಷದಲ್ಲಿ ಶೂನ್ಯ ಪ್ರಗತಿ ದಾಖಲಾಗಲಿದೆ ಹಾಗೂ 2020-21ನೇ ಹಣಕಾಸು ವರ್ಷದಲ್ಲಿ 0.8% ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News