ಲಾಕ್‍ಡೌನ್ ಜಾರಿಗೆ ಅರೆಸೇನಾ ಪಡೆ ನಿಯೋಜಿಸಿ ಎಂದ ಪಶ್ಚಿಮ ಬಂಗಾಳ ರಾಜ್ಯಪಾಲರ ಟ್ವೀಟ್ ವಿವಾದದಲ್ಲಿ

Update: 2020-04-15 11:14 GMT

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸುವ ಕುರಿತಂತೆ ಯೋಚಿಸಬೇಕೆಂದು ಬುಧವಾರ ಟ್ವೀಟ್ ಮಾಡುವ ಮೂಲಕ ರಾಜ್ಯಪಾಲ ಜಗದೀಪ್ ಧನ್ಖರ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ.

"#ಕೊರೋನವೈರಸ್ ಹೊಡೆದೋಡಿಸಲು ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಶೇ 100ರಷ್ಟು ಸಾಮಾಜಿಕ ಅಂತರ ನಿಯಮ ಪಾಲಿಸಲು ಅಥವಾ ಧಾರ್ಮಿಕ ಸಭೆಗಳನ್ನು ನಿಯಂತ್ರಿಸಲು ವಿಫಲವಾಗಿರುವ ಪೊಲೀಸ್ ಹಾಗೂ ಆಡಳಿತ @MamataOfficial ಬಾಗಿಲು ತೋರಿಸಬೇಕು. ಲಾಕ್‍ಡೌನ್ ಯಶಸ್ವಿಯಾಗಬೇಕು. ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸುವ ಕುರಿತಂತೆ ಪರಿಶೀಲಿಸಿ,'' ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದರು.

ಜನರು ಅಗತ್ಯ ವಸ್ತುಗಳ ಖರೀದಿಗೆ ಮನೆಗಳಿಂದ ಹೊರ ಹೋಗುವ ವೇಳೆ ಗುಂಪು ಸೇರದಂತೆ ಪೊಲೀಸರು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆಯೇ ರಾಜ್ಯಪಾಲರ ಈ ಟ್ವೀಟ್ ಬಂದಿದೆ. ಜನರು ಗುಂಪು ಸೇರಿದ್ದಾರೆಯೇ ಎಂದು ತಿಳಿಯಲು ಡ್ರೋನ್‍ಗಳನ್ನು ಕೂಡ ಬಳಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News