ಭಾರತದಲ್ಲಿ ಕೊರೋನ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 17,265ಕ್ಕೆ ಏರಿಕೆ

Update: 2020-04-20 06:46 GMT

ಹೊಸದಿಲ್ಲಿ, ಎ.20: ಭಾರತದಲ್ಲಿ ಸೋಮವಾರ ಬೆಳಗ್ಗೆ ಕೊರೋನ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 17,265ಕ್ಕೆ ಏರಿಕೆಯಾಗಿದ್ದು, ಕನಿಷ್ಠ 543 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

 ದೇಶದಲ್ಲಿ 17,265 ಕೊರೋನ ಸೋಂಕಿತ ಪೈಕಿ 14,715 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 2,546 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

ರವಿವಾರ ದೇಶಾದ್ಯಂತ 1,600ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು.

      ಇದೇ ವೇಳೆ, ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಹೊಟೇಲ್‌ಗಳ ಪುನರಾರಂಭ ಸೇರಿದಂತೆ ಹಲವು ನಿರ್ಧಾರಗಳ ಮೂಲಕ ಕೇಂದ್ರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಕೇಂದ್ರಸರಕಾರ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದೆ.

ಮತ್ತೊಂದೆಡೆ ದಿಲ್ಲಿ ಹಾಗೂ ಪಂಜಾಬ್ ಸರಕಾರಗಳು ಮೇ 3ರ ತನಕ ಲಾಕ್‌ಡೌನ್ ನಿರ್ಬಂಧವನ್ನು ಸಡಿಲಿಸುವುದಿಲ್ಲ ಎಂದು ಹೇಳಿವೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ಸರಕಾರ ಮೇ 7ರ ತನಕವೂ ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News