ಪುಣೆಯ ಮಸೀದಿಯಲ್ಲಿ ಕ್ವಾರಂಟೈನ್ ವ್ಯವಸ್ಥೆಗೆ ಅವಕಾಶ

Update: 2020-04-25 08:56 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.25:ಕೊರೋನ ವೈರಸ್‌ನಿಂದ ಬಾಧಿತವಾಗಿರುವ ಪುಣೆ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದು ತನ್ನ ಆವರಣದೊಳಗಿರುವ ಮಸೀದಿಯ ಹಾಲ್‌ನ್ನು ಕ್ವಾರಂಟೈನ್ ವ್ಯವಸ್ಥೆಗೆ ಒದಗಿಸಲು ಮುಂದಾಗಿದೆ.

ಮಸೀದಿಯ ಹಾಲ್ ಪುಣೆಯ ವೈರಸ್ ಹಾಟ್‌ಸ್ಪಾಟ್ ಪೈಕಿ ಒಂದಾಗಿರುವ ಭವಾನಿ ಪೀಠ ಪ್ರದೇಶದ ಆಝಾದ್ ಸಂಸ್ಥೆಯ ಕ್ಯಾಂಪಸ್‌ನಲ್ಲಿದೆ. 9,000 ಚದರ ಅಡಿ ಪ್ರದೇಶದಲ್ಲಿ ಸುರಕ್ಷಿತ ಅಂತರ ನಿಯಮದೊಂದಿಗೆ 80 ಜನರು ಸುಲಭವಾಗಿ ವಾಸವಾಗಲು ಯೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಂಟೈನ್‌ನಲ್ಲಿರುವವರಿಗೆ ಅಗತ್ಯವಿದ್ದರೆ ಆಹಾರವನ್ನು ಒದಗಿಸಲಿದ್ದೇವೆ.ಇದು ಅಸಾಮಾನ್ಯ ಸಮಯ. ಕೊರೋನ ವೈರಸ್‌ನ್ನು ಹತ್ತಿಕ್ಕಲು ಪ್ರತಿಯೊಬ್ಬರು ಮುಂದೆ ಬರಬೇಕಾಗಿದೆ ಎಂದು ಆಝಾದ್ ಸಂಸ್ಥೆಯಿಂದ ನಡೆಸಲ್ಪಡುವ ಮಹಾರಾಷ್ಟ್ರ ಕಾಸ್ಮೋಪಾಲಿಟನ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪಿ.ಎ. ಇನಾಂದಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News