ಗುಜರಾತ್‍ ನಲ್ಲಿ 3,000ದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ: ಗಂಭೀರ ಪರಿಸ್ಥಿತಿ ಎಂದ ಕೇಂದ್ರ

Update: 2020-04-26 12:51 GMT

ಅಹ್ಮದಾಬಾದ್: ಗುಜರಾತ್‍ ನಲ್ಲಿ ರವಿವಾರ ಕೋವಿಡ್-19 ಸೋಂಕಿತರ ಸಂಖ್ಯೆ 3,071ನ್ನು ತಲುಪಿದ್ದು, ಶನಿವಾರ ಒಂದೇ ದಿನ 256 ಹೊಸ ಪ್ರರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಶನಿವಾರ ಆರು ಮಂದಿ ಮೃತಪಟ್ಟಿದ್ದು, ಗುಜರಾತ್ ನಲ್ಲಿ ಸೋಂಕಿತರ ಸಂಖ್ಯೆ 133ಕ್ಕೇರಿದೆ. ಈ ಮೂಲಕ ಮಹಾರಾಷ್ಟ್ರ ಹೊರತುಪಡಿಸಿದರೆ ಗರಿಷ್ಠ ಸೋಂಕಿತರನ್ನು ಹೊಂದಿದ ರಾಜ್ಯವಾಗಿದೆ ಗುಜರಾತ್.

ಇತ್ತೀಚಿನ ದಿನಗಳಲ್ಲಿ ಗರಿಷ್ಠ ಪ್ರಕರಣಗಳು ಕಂಡುಬಂದಿರುವ ಸೂರತ್ ಮತ್ತು ಅಹ್ಮದಾಬಾದ್‍ನಲ್ಲಿ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿದ ಕೇಂದ್ರ ಸರ್ಕಾರದ ಎರಡು ನಿಯೋಗಗಳ ಸದಸ್ಯರು ಪರಿಸ್ಥಿತಿಯನ್ನು ಪರಿಶೀಲಿಸಿದರು.

ಈ ಎರಡು ನಗರಗಳು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಅಹ್ಮದಾಬಾದ್‍ನಲ್ಲಿ ಶನಿವಾರ 182 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 2000ದ ಗಡಿ ದಾಟಿದೆ. ಸೂರತ್‍ನಲ್ಲಿ 34 ಹೊಸ ಪ್ರಕರಣಗಳೊಂದಿಗೆ ಒಟ್ಟು ಸಂಖ್ಯೆ 496ಕ್ಕೇರಿದೆ.

ಬಾಣಸಕಾಂತದಲ್ಲಿ 11, ವಡೋದರದಲ್ಲಿ 7, ಭಾನಗರ ಮತ್ತು ಆನಂದ್‍ನಲ್ಲಿ ತಲಾ 5, ಗಾಂಧಿನಗರದಲ್ಲಿ 4, ಛೋಟಾ ಉದೇಪುರ ಮತ್ತು ಪಂಚಮಹಲ್‍ಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News