ನೀತಿ ಆಯೋಗದ ಅಧಿಕಾರಿಗೆ ಕೊರೋನ ವೈರಸ್ ದೃಢ: ಕಚೇರಿಗೆ ಬೀಗ

Update: 2020-04-28 15:45 GMT

ಹೊಸದಿಲ್ಲಿ, ಎ.28: ನೀತಿ ಆಯೋಗದ ಅಧಿಕಾರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿರುವ ನೀತಿ ಆಯೋಗದ ಮುಖ್ಯ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಗ್ಯ ಇಲಾಖೆ ಮಾರ್ಗದರ್ಶಿ ಸೂತ್ರದಲ್ಲಿ ಸೂಚಿಸಿದ ಎಲ್ಲಾ ಶಿಷ್ಟಾಚಾರಗಳನ್ನೂ ನೀತಿ ಆಯೋಗ ಪಾಲಿಸುತ್ತಿದೆ. ಇದರಂತೆ ನೀತಿ ಆಯೋಗದ ಮುಖ್ಯಕಚೇರಿ ಇರುವ ನೀತಿ ಭವನ ಕಟ್ಟಡವನ್ನು 48 ಗಂಟೆಯ ಅವಧಿಗೆ ಸೀಲ್ ಮಾಡಿ ಸ್ವಚ್ಛಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀತಿ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ದೇಶಕ ಶ್ರೇಣಿಯ ಅಧಿಕಾರಿಯನ್ನು ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಿದ್ದು ಸೋಂಕು ತಗಲಿರುವುದು ಮಂಗಳವಾರ ಬೆಳಿಗ್ಗೆ ದೃಢಪಟ್ಟಿದೆ. ಇವರೊಂದಿಗೆ ಕೆಲಸ ಮಾಡುತ್ತಿದ್ದವರು ಹಾಗೂ ಈ ಅಧಿಕಾರಿಯ ಜೊತೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ನೀತಿ ಆಯೋಗದ ಸಲಹೆಗಾರ ಅಲೋಕ್ ಕುಮಾರ್ ಹೇಳಿದ್ದಾರೆ.

ಕಳೆದ ವಾರ ನಾಗರಿಕ ವಿಮಾನಯಾನ ಇಲಾಖೆಯ ಸಿಬಂದಿಯಲ್ಲಿ ಸೋಂಕು ದೃಢಪಟ್ಟ ಕಾರಣ ಹೊಸದಿಲ್ಲಿಯ ರಾಜೀವಗಾಂಧಿ ಭವನದಲ್ಲಿರುವ ಕೇಂದ್ರ ಕಚೇರಿಯನ್ನು ಸೀಲ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News