ಕೋಲ್ಕತಾದ ಕೋವಿಡ್-19 ಆಸ್ಪತ್ರೆ ಕಟ್ಟಡದಿಂದ ಜಿಗಿದು ವೈದ್ಯೆ ಆತ್ಮಹತ್ಯೆ

Update: 2020-05-01 16:09 GMT

ಕೋಲ್ಕತಾ,ಮೇ 1: ಕೋಲ್ಕತಾದ ಕೋವಿಡ್ ಆಸ್ಪತ್ರೆ ಕಟ್ಟಡದ ಆರನೇ ಮಹಡಿಯಿಂದ ಜಿಗಿದು 25ರ ವಯಸ್ಸಿನ ಕಿರಿಯ ವೈದ್ಯೆ ಆತ್ಮಹತ್ಯೆಗೈದಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ನಗರದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಜ್ವರದ ಕ್ಲಿನಿಕ್ನಲ್ಲಿ ತನ್ನ ಪಾಳಿ ನಿರ್ವಹಿಸುವ ಮೊದಲು ಕಿರಿಯ ವೈದ್ಯೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೈದಿದ್ದಾರೆ. ಮೃತ ಯುವತಿಯನ್ನು ಪೌಲಮಿ ಸಹಾ ಎಂದು ಗುರುತಿಸಲಾಗಿದೆ.

ಈಕೆ ಆಸ್ಪತ್ರೆಯಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಟ್ರೈನಿ ಆಗಿದ್ದರು. ಸಹಾ ಬೆಳಗ್ಗೆ 11ರ ಸುಮಾರಿಗೆ ಆಸ್ಪತ್ರೆ ಕಟ್ಟಡದ ಆರನೇ ಮಾಳಿಗೆಯಿಂದ ಹಾರಿ ಸಾವನ್ನಪ್ಪಿದ್ದಾರೆ. ಈಕೆ ಖಿನ್ನತೆಯಿಂದ ಬಳಲುತ್ತಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದ್ದು, ಸುಸೈಡ್ ನೋಟ್ ಪತ್ತೆಯಾಗಿಲ್ಲ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ ಎಂದು ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News