ವಿದ್ಯಾರ್ಥಿನಿಯರ ಅತ್ಯಾಚಾರಗೈಯುವ ಚಾಟ್: ಇನ್‍ಸ್ಟಾಗ್ರಾಂ ಚಾಟ್‍ರೂಂನ ಬಾಲಕ ಪೊಲೀಸ್ ವಶಕ್ಕೆ

Update: 2020-05-05 11:19 GMT

ಹೊಸದಿಲ್ಲಿ: Bois Locker Room  ಎಂಬ ಇನ್‍ಸ್ಟಾಗ್ರಾಂ ಚಾಟ್‍ರೂಂನಲ್ಲಿ ‘ಶಾಲಾ ಬಾಲಕಿಯರ ಗ್ಯಾಂಗ್ ರೇಪ್ ಮಾಡುವ ಕುರಿತ' ಆಘಾತಕಾರಿ ಪೋಸ್ಟ್ ಗಳನ್ನು ಮಾಡುತ್ತಿದ್ದ ಘಟನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಶಾಲಾ ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಹಲವು ಮಂದಿ ಇತರರನ್ನು ಗುರುತಿಸಿದ್ದಾರೆ.

ರವಿವಾರ ಮೊದಲು ಬೆಳಕಿಗೆ ಬಂದ ಈ ವಿದ್ಯಮಾನ ರಾಜಧಾನಿಯಲ್ಲಿ ಭಾರೀ ಆಕ್ರೋಶ ಮೂಡಿಸಿದ್ದು, ಸದ್ಯ ಈ ಗ್ರೂಪ್ ಅನ್ನು ಡಿಆ್ಯಕ್ವಿವೇಟ್ ಮಾಡಲಾಗಿದೆ.

ಈ ಗ್ರೂಪ್‍ ನಲ್ಲಿ ಸಕ್ರಿಯವಾಗಿದ್ದ 20ಕ್ಕೂ ಅಧಿಕ ಬಾಲಕರ ಹೆಸರುಗಳನ್ನು ಬಾಲಕ ಬಹಿರಂಗಪಡಿಸಿದ್ದಾನೆ. ದಿಲ್ಲಿ ಪೊಲೀಸರ ಸೈಬರ್ ಸೆಲ್ ಆತನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದೆ.

ದಕ್ಷಿಣ ದಿಲ್ಲಿಯ ನಾಲ್ಕರಿಂದ ಐದು ಶಾಲೆಗಳ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಈ ಗ್ರೂಪ್‍ನಲ್ಲಿ ಸಕ್ರಿಯವಾಗಿದ್ದಾರೆನ್ನಲಾಗಿದ್ದು  ಅವರೆಲ್ಲರೂ ಬಹಳ ಸಹಜವಾಗಿ ಅತ್ಯಾಚಾರ,  ಲೈಂಗಿಕ ವಿಚಾರಗಳು ಹಾಗೂ ಶಾಲಾ ಬಾಲಕಿಯರನ್ನು ಅವಹೇಳನಗೈಯ್ಯುವ ವಿಚಾರಗಳನ್ನು ಮಾತನಾಡುತ್ತಿದ್ದರು.

ಈ ಗ್ರೂಪ್‍ನ ಕುರಿತು ಹೆಚ್ಚಿನ ಮಾಹಿತಿಗೆ ದಿಲ್ಲಿ ಪೊಲೀಸರ ಸೈಬರ್ ಅಪರಾಧ ಘಟಕವು ಫೇಸ್ ಬುಕ್ ಒಡೆತನದ ಇನ್‍ಸ್ಟಾಗ್ರಾಂಗೆ ಪತ್ರ  ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News